ಮಗನ ಹೆಸರು ಬಳಸಿಕೊಂಡು ಚುನಾವಣೆಗೆ ನಿಲ್ಲಲು ನಾವು ಬಿಡಲ್ಲ: ಕುಸುಮಾ ವಿರುದ್ಧ ಡಿಕೆ ರವಿ ತಾಯಿ ಆಕ್ರೋಶ
ಆರ್.ಆರ್.ನಗರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಿವಗಂತ ಡಿ.ಕೆ.ರವಿ ಪತ್ನಿ ಕುಸುಮಾಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.ಇದಕ್ಕೆ ಡಿ.ಕೆ.ರವಿ ಅವರ ಕುಟುಂಬ ತೀವ್ರ ವಿರೋಧ ವ್ಯಕ್ತಪ ಡಿಸಿದ್ದಾರೆ.

ತುಮಕೂರು: ಆರ್.ಆರ್.ನಗರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಿವಗಂತ ಡಿ.ಕೆ.ರವಿ ಪತ್ನಿ ಕುಸುಮಾಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಇದಕ್ಕೆ ಡಿ.ಕೆ.ರವಿ ಅವರ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕುಣಿಗಲ್ನ ದೊಡ್ಡಕೊಪ್ಪಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ.ರವಿ ತಾಯಿ ಗೌರಮ್ಮ. ತಮ್ಮ ಮಗನ ಜೊತೆ ಅವಳು ಹೋಗಿಬಿಟ್ಲು ಅಂತಾ ತಿಳಿದುಕೊಂಡಿದ್ದೇನೆ. ನನ್ನ ಮಗನ ದುಡ್ಡಲ್ಲಿ ಒಂದು ರೂಪಾಯಿ ನಮ್ಮ ಕಷ್ಟಕ್ಕೆ ಸೊಸೆಯಾದ ಕುಸುಮಾ ನೀಡಲಿಲ್ಲ. ನನ್ನ ಮಗನ ಹೆಸರು ಹೇಳಿಕೊಂಡು ಏಕೆ ಅವಳು ಚುನಾವಣೆಗೆ ನಿಲ್ಲಬೇಕು. ಡಿ.ಕೆ.ರವಿ ಅಂತ್ಯಸಂಸ್ಕಾರ ಮಾಡಿದ ದಿನ ಮಣ್ಣಲ್ಲಿ ಬಿಸಾಕಿ ಹೋಗಿದ್ದವಳು ಇವತ್ತಿನವರೆಗೂ ಬಂದಿಲ್ಲ ಎಂದು ಗೌರಮ್ಮ ಕಿಡಿಕಾರಿದ್ದಾರೆ.
ಅಲ್ಲದೆ ಮಗನ ಹೆಸರು ಹೇಳಿಕೊಂಡು ಚುನಾವಣೆಗೆ ಸ್ಪರ್ಧಿಸಿದರೆ ಸರಿ ಇರಲ್ಲ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


