ಮೋದಿ ಮಾಡಿದ ತಪ್ಪಿನಿಂದ ದೇಶಕ್ಕೆ ಕೊರೊನಾ ಬಂದಿದೆಯೇ ಹೊರತು ತಬ್ಲಿಘಿಗಳಿಂದಲ್ಲ: ಸಿದ್ದರಾಮಯ್ಯ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ತಪ್ಪಿನಿಂದ ದೇಶಕ್ಕೆ ಕೊರೋನಾ ಬಂದಿದೆಯೇ ಹೊರತು ತಬ್ಲಿಘಿಗಳಿಂದ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ತಪ್ಪಿನಿಂದ ದೇಶಕ್ಕೆ ಕೊರೋನಾ ಬಂದಿದೆಯೇ ಹೊರತು ತಬ್ಲಿಘಿಗಳಿಂದ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯದ 4 ಸಾವಿರ ಜನರಿಗೆ ರಂಜಾನ್ ಪ್ರಯುಕ್ತ ಫುಡ್ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಜನವರಿ 30 ಕ್ಕೆ ಕೇರಳದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿತ್ತು. ಅಂದೇ ವಿಮಾನ ಹಾರಾಟ ಸ್ಥಗಿತ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೊರೋನಾ ಹರಡಲು ತಬ್ಲಿಘಿಗಳು ಕಾರಣ ಎಂದು ಆರ್ ಎಸ್ ಎಸ್ ಮತ್ತು ಬಿಜೆಪಿಯವರು ದೇಶದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ನಿಜ ಏನೆಂದರೆ ಪ್ರಧಾನಿ ಮೋದಿ ಮಾಡಿದ ತಪ್ಪಿಗೆ ಈ ದೇಶಕ್ಕೆ ಕೊರೋನಾ ಬಂದಿದೆಯೇ ವಿನಃ ತಬ್ಲಿಘಿಗಳಿಂದ ಅಲ್ಲ. ಚೀನಾ, ಸ್ಪೇನ್, ಇಟಲಿ ಮತ್ತು ಅಮೆರಿಕದಲ್ಲಿ ತಬ್ಲಿಘಿಯವರು ಇದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಮೋದಿ ಜನರಿಗೆ ಬರೀ ಸುಳ್ಳು ಹೇಳ್ತಿದ್ದಾರೆ ಅಷ್ಟೇ, 20 ಲಕ್ಷ ಕೋಟಿಯನ್ನು ಅವರಿಗೆ ಬರೆಯೋಕೂ ಅವರಿಗೆ ಬರಲ್ಲ. ಇನ್ನೂ ಯಡಿಯೂರಪ್ಪ ರೈತನ ಮಗ ಅಂತಾರೆ, ಅವರು ಯಾವ ರೈತನ ಮಗ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


