ರಾಜಕೀಯ

ಯಡಿಯೂರಪ್ಪ ಸಂಬಂಧಿ ವಿರುದ್ಧ ಭ್ರಷ್ಟಾಚಾರ ಆರೋಪ: ಆಡಿಯೋ ರಿಲೀಸ್ ಮಾಡಿದ ಸಾ ರಾ ಮಹೇಶ್

ಮೈಮೂಲ್‌ ನಲ್ಲಿ ಅಕ್ರಮ ನಡೆಯುತ್ತಿದ್ದು, ಅಲ್ಲಿ ಯಾರಿಗೆ ಹೆಚ್ಚು ಹಣ ನೀಡುತ್ತಾರೋ ಅವರಿಗೆ ಮೈಮುಲ್ ನಲ್ಲಿ ಹುದ್ದೆ ನೀಡಲಾಗುತ್ತಿದೆ ಎಂದು ಶಾಸಕ ಸಾ.ರಾ. ಮಹೇಶ್ ಆರೋಪಿಸಿದರು.

ಯಡಿಯೂರಪ್ಪ ಸಂಬಂಧಿ ವಿರುದ್ಧ ಭ್ರಷ್ಟಾಚಾರ ಆರೋಪ: ಆಡಿಯೋ ರಿಲೀಸ್ ಮಾಡಿದ ಸಾ ರಾ ಮಹೇಶ್
ಸಾರಾ ಮಹೇಶ್
Published On :

ಮೈಸೂರು: ಮೈಮೂಲ್‌ ನಲ್ಲಿ ಅಕ್ರಮ ನಡೆಯುತ್ತಿದ್ದು, ಅಲ್ಲಿ ಯಾರಿಗೆ ಹೆಚ್ಚು ಹಣ ನೀಡುತ್ತಾರೋ ಅವರಿಗೆ ಮೈಮುಲ್ ನಲ್ಲಿ ಹುದ್ದೆ ನೀಡಲಾಗುತ್ತಿದೆ ಎಂದು ಶಾಸಕ ಸಾ.ರಾ. ಮಹೇಶ್  ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಮುಲ್ ಹುದ್ದೆಗಳು ಹಣಕ್ಕೆ ಮಾರಾಟವಾಗಿರುವ ಬಗ್ಗೆ ಆಡಿಯೋ ಬಿಡುಗಡೆ ಮಾಡಿದರು. ಮೈಮುಲ್ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿ ಹಾಗೂ ಆಯ್ಕೆಯಾಗದ ಅಭ್ಯರ್ಥಿಗಳ ನಡುವಿನ ಸಂಭಾಷಣೆ ಇದಾಗಿದ್ದು, ನಾಮನಿರ್ದೇಶಿತ ಮೈಮುಲ್ ನಿರ್ದೇಶಕರ ಹೆಸರು ಆಡಿಯೋದಲ್ಲಿದೆ. ಅಲ್ಲದೇ ಒಬ್ಬರಿಗೆ ಹುದ್ದೆ ನೀಡಲು 40 ಲಕ್ಷ ಪಡೆದಿದ್ದಾರೆ. 18 ಸಾವಿರ ಜನ ಪರೀಕ್ಷೆ ಬರೆದರೆ 200 ಮಂದಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಅಕ್ಕನ ಮಗ,ತಂಗಿಯ ಮಗನೆ ಬುದ್ದಿವಂತನೇ? ಪರೀಕ್ಷೆ ಮುಗಿದು ಇಷ್ಟು ದಿನವಾದರೂ ಕೀ ಉತ್ತರಗಳನ್ನ ಏತಕ್ಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮೈಮುಲ್ ನೇಮಕಾತಿ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಈ ನಡುವೆಯೇ ಸಂದರ್ಶನ ನಡೆಸಲು ಸಿದ್ಧತೆ ನಡೆದಿದೆ. ಇದನ್ನು ಖಂಡಿಸಿ ಮೈಸೂರು ಹಾಲು ಒಕ್ಕೂಟದ ಮುಂದೆ ಬರುವ 19ರಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ಇದೇ ಮೈಮೂಲ್‌ ಡೈರಿ ಅಧ್ಯಕ್ಷರ ಅಕ್ಕನ ಮಗ ಹಾಗೂ ತಂಗಿಯ ಮಗನಿಗೆ ಸಂದರ್ಶನ ಮಾಡುತ್ತಿದ್ದಾರೆ. ಈಬಗ್ಗೆ ಇಂದು ಆಡಿಯೋ ಸಹ ಬಿಡುಗಡೆ ಮಾಡಿದ್ದಾನೆ. ಮೈಮುಲ್ ನಾಮನಿರ್ದೇಶಿತ ನಿರ್ದೇಶಕ ಅಶೋಕ್ ಹೆಸರು ಆಡಿಯೋದಲ್ಲಿದೆ. ಅಶೋಕ್ ಸಿಎಂ ಯಡಿಯೂರಪ್ಪ ಸಂಬಂಧಿ. ಇದೇ ಆಡಿಯೋ ಆಧಾರದ ಮೇಲೆ ಸೂಕ್ತ ತನಿಖೆ ಆಗಬೇಕು. ಇಡೀ ಪ್ರಕ್ರಿಯೆಯನ್ನು ರದ್ದು ಮಾಡಬೇಕು. ಹೊಸದಾಗಿ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.