ರಾಜಕೀಯ

'ನನ್ನ ಸರ್ಕಾರ ಕೆಡವಿದ ಹಾಗೆ ಯಡಿಯೂರಪ್ಪ ಸರ್ಕಾರ ಬೀಳಿಸಲು ಯೋಗೇಶ್ವರ್ ಸ್ಕೆಚ್'

ಸಿ.ಪಿ. ಯೋಗೇಶ್ವರ್​ ಬಿಜೆಪಿ ಸರ್ಕಾರ ಕೆಡವಲು ಪ್ಲ್ಯಾನ್ ಮಾಡುತ್ತಿದ್ದಾರೆ. ಉದ್ಯಮಿ ಉದಯ್ ಗೌಡನನ್ನು ಮುಂದಿಟ್ಟುಕೊಂಡು ಈ ಕುರಿತಾಗಿ ಪ್ಲ್ಯಾನ್ ನಡೆಯುತ್ತಿದೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

'ನನ್ನ ಸರ್ಕಾರ ಕೆಡವಿದ ಹಾಗೆ ಯಡಿಯೂರಪ್ಪ ಸರ್ಕಾರ ಬೀಳಿಸಲು ಯೋಗೇಶ್ವರ್ ಸ್ಕೆಚ್'
ಯೋಗೇಶ್ವರ್
Published On :

ರಾಮನಗರ: ಸಿ.ಪಿ. ಯೋಗೇಶ್ವರ್​ ಬಿಜೆಪಿ ಸರ್ಕಾರ ಕೆಡವಲು ಪ್ಲ್ಯಾನ್ ಮಾಡುತ್ತಿದ್ದಾರೆ. ಉದ್ಯಮಿ ಉದಯ್ ಗೌಡನನ್ನು ಮುಂದಿಟ್ಟುಕೊಂಡು ಈ ಕುರಿತಾಗಿ ಪ್ಲ್ಯಾನ್ ನಡೆಯುತ್ತಿದೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸ್ವಕ್ಷೇತ್ರ ಚನ್ನಪಟ್ಟಣದ ದೊಡ್ಡಮಳೂರಿನ ಬಮೂಲ್​ ಉತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು , ಸಿಪಿ ಯೋಗೇಶ್ವರ್ ಮತ್ತು  ಉದಯ್​ಗೌಡ ಬಿಎಸ್ ವೈ ಸರ್ಕಾರ ಬೀಳಿಸಲು ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಉದಯ್ ಗೌಡ  ಬೆಂಗಳೂರಿನಲ್ಲಿ ಇಸ್ಪೀಟ್ ದಂಧೆ ನಡೆಸುತ್ತಿದ್ದಾನೆ. ನನ್ನ ಸರ್ಕಾರದಲ್ಲಿ ಅದಕ್ಕೆಲ್ಲಾ ಕಡಿವಾಣ ಹಾಕಿದ್ದೆ. ಹಾಗಾಗಿ ಇವರೆಲ್ಲಾ ಸೇರಿ ಹಣ ಹಾಕಿ ನನ್ನ ಸರ್ಕಾರ ಬೀಳಿಸಿದರು. ಈಗ ಈ ಕ್ಷೇತ್ರದ ಮಾಜಿ ಶಾಸಕ (ಸಿ.ಪಿ.ಯೋಗೇಶ್ವರ್​​​)ನ ಜೊತೆಗೆ ಸೇರಿ ಬಿಜೆಪಿ ಸರ್ಕಾರ ತೆಗೆಯಲು ಹೊರಟಿದ್ದಾರೆ ಎಂದು ಎಚ್​ಡಿಕೆ ಗಂಭೀರ ಆರೋಪ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.