ರಾಜಕೀಯ

ಪಾಕಿಸ್ತಾನ​ ಪರ ಮಾತಾಡುವ ಕುಮಾರಸ್ವಾಮಿಯವರದ್ದೂ ಒಂದು ಬದುಕಾ?

ಪಾಕಿಸ್ತಾನ ಪರ ವಹಿಸಿ ಮಾತನಾಡುವ ಮಾಜಿ ಸಿಎಂ ಕುಮಾರಸ್ವಾಮಿ ಅವರದು ಒಂದು ಬದುಕಾ ಎಂದು ಸಚಿವ ಆರ್​ ಅಶೋಕ್​ ಪ್ರಶ್ನಿಸಿದ್ದಾರೆ.

ಪಾಕಿಸ್ತಾನ​ ಪರ ಮಾತಾಡುವ ಕುಮಾರಸ್ವಾಮಿಯವರದ್ದೂ ಒಂದು ಬದುಕಾ?
ಎಚ್.ಡಿ ಕುಮಾರಸ್ವಾಮಿ
Published On :

ಬೆಂಗಳೂರು: ಪಾಕಿಸ್ತಾನ ಪರ ವಹಿಸಿ ಮಾತನಾಡುವ ಮಾಜಿ ಸಿಎಂ ಕುಮಾರಸ್ವಾಮಿ ಅವರದು ಒಂದು ಬದುಕಾ ಎಂದು ಸಚಿವ ಆರ್​ ಅಶೋಕ್​  ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಇಲ್ಲದಿದ್ದರೆ ನೀವು ಇಲ್ಲಿ ಒಂದು ಮತವನ್ನು ಕೂಡ ಪಡೆಯುತ್ತಿರಲಿಲ್ಲ. ಅದಕ್ಕಾಗಿಯೇ ಪಾಕಿಸ್ತಾನ ನಾಮ ಸ್ಮರಣೆ ನಿಮ್ಮ ಕಾಯಕವಾಗಿದೆ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಉದ್ದೇಶಿಸಿ ಟ್ವೀಟ್​ ಮಾಡಿದ್ದರು.

ಕುಮಾರಸ್ವಾಮಿ ಅವರ ಈ ಟ್ವೀಟ್​ಗೆ  ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್​ಗೆ ಹೋಗುವ ಆತಂಕದಲ್ಲಿ ಅವರು ಈ ರೀತಿ ಮಾತಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು  ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಪಾಕ್​ ಅನ್ನು ಬೆಂಬಲಿಸುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಪ್ರತಿಕ್ರಿಯಿಸಿದರು.

ನಮಗೆ ಪಾಕ್​ ಧ್ವಜ ನೋಡಿದರೆ ಸಿಟ್ಟು ಬರುತ್ತದೆ. ಆದರೆ, ಇಲ್ಲಿದ್ದುಕೊಂಡು ಇವರುಗಳು ಪಾಕ್​ ಬೆಂಬಲಿಸುತ್ತಾರೆ ಎಂದು ಕೂಡ ಹರಿಹಾಯ್ದರು. ಇದೇ ವೇಳೆ ಮಂಗಳೂರು ಬಾಂಬ್​ ಪ್ರಕರಣ ಕುರಿತು ಮಾತನಾಡಿದ ಅವರು, ಆದಿತ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದಿತ್ಯನದ್ದು ಮಾನಸಿಕ ಸ್ಥಿತಿ ಸರಿಯಿಲ್ಲ. ಆ ಬಗ್ಗೆ ವೈದ್ಯರು ಕೂಡ ಹೇಳಬೇಕಿದೆ. ಮುಸ್ಲಿಂ ಇರಲಿ, ಹಿಂದೂ ಆಗಿರಲಿ. ಎಲ್ಲರಿಗೂ ಕಾನೂನು ಒಂದೇ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.