ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಿಲ್ಲಾ ರಾಜಕೀಯ ಧ್ರುವೀಕರಣಕ್ಕೆ ಸಜ್ಜಾಗುತ್ತಿದೆ ಕುಂದಾನಗರಿ?
ಕಳೆದ ಬಾರಿಯ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಂದಾಗಿ ರಾಜ್ಯ ರಾಜಕಾರಣವೇ ಬದಲಾಗಿ ಹೋಯಿತು. ಈಗ ಮತ್ತೆ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಎದುರಾಗಿದ್ದು, ಮತ್ತೊಮ್ಮೆ ಸ್ವಪಕ್ಷೀಯರ ನಾಯಕರ ಜಿದ್ದಾಜಿದ್ದಿ ವೇದಿಕೆಯಾಗುತ್ತಿದೆ.

ಬೆಳಗಾವಿ: ಕಳೆದ ಬಾರಿಯ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಂದಾಗಿ ರಾಜ್ಯ ರಾಜಕಾರಣವೇ ಬದಲಾಗಿ ಹೋಯಿತು. ಈಗ ಮತ್ತೆ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಎದುರಾಗಿದ್ದು, ಮತ್ತೊಮ್ಮೆ ಸ್ವಪಕ್ಷೀಯರ ನಾಯಕರ ಜಿದ್ದಾಜಿದ್ದಿ ವೇದಿಕೆಯಾಗುತ್ತಿದೆ.
ಎಪ್ರಿಲ್ನಲ್ಲಿ ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಜಿಲ್ಲೆಯ ಘಟಾನುಘಟಿ ನಾಯಕರು ಈಗಿನಿಂದಲೇ ತಯಾರಿಗೆ ಸಜ್ಜಾಗಿದ್ದಾರೆ. ರಮೇಶ್ ಜಾರಕಿಹೊಳಿ-ಉಮೇಶ್ ಕತ್ತಿ- ಲಕ್ಷ್ಮಣ ಸವದಿ ಮೂವರು ಅಧಿಕಾರ ಪಡೆಯಲು ಹವಣಿಸುತ್ತಿದ್ದಾರೆ.
ಜಿಲ್ಲೆಯ ಮೂವರು ನಾಯಕರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಬ್ಯಾಂಕ್ನ ಅಧ್ಯಕ್ಷ ಸ್ಥಾನದ ಗದ್ದುಗೆ ಹಿಡಿಯಲು ನಾಯಕರು ತೀವ್ರ ಪೈಪೋಟಿ ನಡೆಸಿದ್ದಾರೆ. ವಿಶೇಷವೆಂದರೇ ಮೂವರು ಒಂದೇ ಪಕ್ಷದ ನಾಕರಾಗಿದ್ದಾರೆ.
ಸದ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಉಮೇಶ್ ಕತ್ತಿ ಸಹೋದರ ಮಾಜಿ ಸಂಸದ ರಮೇಶ್ ಕತ್ತಿ ಇದ್ದು, ಇವರೇ ತಮ್ಮ ಆಡಳಿತ ಮುಂದುವರೆಸಲಿ ಎಂಬುದು ಉಮೇಶ್ ಕತ್ತಿ ಅಭಿಪ್ರಾಯ.
ತಮ್ಮ ರಾಜಕೀಯದಲ್ಲಿ ಪ್ರತಿಹೆಜ್ಜೆಯಲ್ಲಿ ಜೊತೆಯಾಗಿದ್ದು, ಸಚಿವ ಸ್ಥಾನದಿಂದ ವಂಚಿರಾಗಿರುವ ಮಹೇಶ್ ಕುಮಠಳ್ಳಿಗೆ ಈ ಸ್ಥಾನ ಕೊಡಿಸಲು ನೂತನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಅಲ್ಲದೇ, ಈ ಕುರಿತು ಸಿಎಂ ಮೇಲೆ ಕೂಡ ಒತ್ತಡ ಹಾಕಿದ್ದಾರೆ.
ಇನ್ನು ನಡುವೆ ಈ ಚುನಾವಣೆ ಡಿಸಿಎಂ ಲಕ್ಷ್ಮಣ ಸವದಿಗೂ ಕೂಡ ಪ್ರತಿಷ್ಠೆ ಕಣವಾಗಿದ್ದು, ಅಧಿಕಾರ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದ್ದಾರೆ.
ಈ ನಡುವೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಸಹ ಡಿಸಿಸಿ ಬ್ಯಾಂಕ್ ಪ್ರವೇಶಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


