ರಾಜಕೀಯ

ಓವೈಸಿ ಏನು ದೊಡ್ಡ ಮನುಷ್ಯನಾ? : ಸಚಿವ ಬಿ. ಶ್ರೀರಾಮುಲು ಪ್ರಶ್ನೆ

ರಾಜ್ಯದಲ್ಲಿ ಬೀದರ್, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಓವೈಸಿ ಸಮ್ಮು ಖದಲ್ಲಿ ಅಮೂಲ್ಯ ಲಿಯೋನ್​,ಇಂದು ವಿದ್ಯಾ ಪಾಕಿಸ್ತಾನ ಜಿಂದಾ ಬಾದ್ ಅಂದಿದ್ದಾರೆ, ಅವರೆಲ್ಲಾ ಭಾರತ್ ಮಾತಾ ಕೀ ಜೈ ಅನ್ನಬೇಕೇ ಹೊರತು, ಪಾಕಿಸ್ತಾನ್​ ಕೀ ಜೈ ಅನ್ನಬಾರದು ಎಂದು ಆರೋಗ್ಯ ಸಚಿವ ಬಿ.ಶ್ರೀರಾ ಮುಲು ಅವರು ಎಚ್ಚರಿಕೆ ನೀಡಿದ್ದಾರೆ.

ಓವೈಸಿ ಏನು ದೊಡ್ಡ ಮನುಷ್ಯನಾ? : ಸಚಿವ ಬಿ. ಶ್ರೀರಾಮುಲು ಪ್ರಶ್ನೆ
ಶ್ರೀರಾಮುಲು
Published On :

ಬಳ್ಳಾರಿ: ರಾಜ್ಯದಲ್ಲಿ ಬೀದರ್, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಓವೈಸಿ ಸಮ್ಮು ಖದಲ್ಲಿ ಅಮೂಲ್ಯ ಲಿಯೋನ್​,ಇಂದು ವಿದ್ಯಾ ಪಾಕಿಸ್ತಾನ ಜಿಂದಾ ಬಾದ್ ಅಂದಿದ್ದಾರೆ, ಅವರೆಲ್ಲಾ ಭಾರತ್ ಮಾತಾ ಕೀ ಜೈ ಅನ್ನಬೇಕೇ ಹೊರತು, ಪಾಕಿಸ್ತಾನ್​ ಕೀ ಜೈ ಅನ್ನಬಾರದು ಎಂದು ಆರೋಗ್ಯ ಸಚಿವ ಬಿ.ಶ್ರೀರಾ ಮುಲು ಅವರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರಿಗೆ ಕಾಂಗ್ರೆಸ್ ನಾಯಕರು ಬೆಂಬಲಿಸುತ್ತಿದ್ದಾರೆ.  ಅಸಾದುದ್ದೀನ್ ಓವೈಸಿ ಎಂತಹ ದೊಡ್ಡ ಮನುಷ್ಯನೋ ನನಗೆ ಗೊತ್ತಿಲ್ಲ, ಪಾಕಿಸ್ತಾನಕ್ಕೆ ಜೈ ಅಂತ ಘೋಷಣೆ ಕೂಗಿಸಿದ ತಕ್ಷಣ ದೊಡ್ಡ ಮನುಷ್ಯರಾಗಿ ಬಿಡ್ತಾರಾ(?) ನಾವೇಲ್ಲಾ ಹಿಂದೂ ನಾಯಕರು ಕೈ ಕಟ್ಟಿಕೊಂಡು ಕುಳಿತಿಲ್ಲ,ನಾವೂ ಕೂಡ ಘೋಷಣೆ ಕೂಗಿ ಸುತ್ತೇವೆ ಎಂದು ಅಸಾದುದ್ದೀನ್ ಓವೈಸಿಗೆ ವಾರ್ನಿಂಗ್ ಕೊಟ್ಟರು.

ಇನ್ನು ಕಾಂಗ್ರೆಸ್​ ವೋಟ್​ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಈ ದೇಶದಲ್ಲಿರೋರು ಭಾರತ್ ಮಾತಾ ಕೀ ಜೈ ಅನ್ನಬೇಕು. ಸದನದಲ್ಲಿ ಇವರ ಪರ ಕಾಂಗ್ರೆಸ್​ನವರು ಮಾತನಾಡುತ್ತೀರಿ. ಎಸ್ಡಿಪಿಐ, ಪಿಎಫ್​ಐ ಸಂಘಟನೆಯವರನ್ನು ನಿಷೇಧ ಮಾಡಬೇಕೆಂದು ನಾವು ಪ್ರಯತ್ನ ಮಾಡುತ್ತಿದ್ದರೇ, ತನ್ವೀರ್ ಸೇಠ್ ಮೇಲೆ, ಹ್ಯಾರಿಸ್ ಮೇಲೆ ಹಲ್ಲೆ ಮಾಡಿದ್ದಾರೆ. ಇಂಥವರನ್ನು ನೀವು ಬೆಂಬಲಿಸುತ್ತೀರಿ, ಕಾಂಗ್ರೆಸ್ ಈಗ ಧೂಳಿಪಟ ಆಗಿದೆ ಎಂದು ಕಾಂಗ್ರೆಸ್​ ವಿರುದ್ಧ ಗುಡುಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.