ಅಪಘಾತ ಪ್ರಕರಣ: ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳುವಷ್ಟು ಸೌಜನ್ಯ ಇಲ್ಲ- ಡಿ.ಕೆ.ಸುರೇಶ್
ಸಚಿವ ಆರ್.ಅಶೋಕ್ ಪುತ್ರನದು ಎನ್ನಲಾದ ಕಾರು ಅಪಘಾತ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನವನ್ನೂ ಹೇಳುವಷ್ಟು ಸೌಜನ್ಯವಾಗಲಿ, ಮಾನವೀಯತೆಯಾಗಲೀ ಬಿಜೆಪಿಯವರಿಗೆ ಇಲ್ಲ ಎಂದು ಟೀಕಿಸಿದರು.

ಬೆಂಗಳೂರು: ಸಚಿವ ಆರ್.ಅಶೋಕ್ ಪುತ್ರನದು ಎನ್ನಲಾದ ಕಾರು ಅಪಘಾತ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನವನ್ನೂ ಹೇಳುವಷ್ಟು ಸೌಜನ್ಯವಾಗಲಿ, ಮಾನವೀಯತೆಯಾಗಲೀ ಬಿಜೆಪಿಯವರಿಗೆ ಇಲ್ಲ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಏನೇ ಮಾಡಿದರೂ ಅಪಚಾರವಾಗುತ್ತದೆ. ನಲಪಾಡ್ ಘಟನೆ ಬಗ್ಗೆ ಮಾತ್ರವೇ ಚರ್ಚೆಯಾಗುತ್ತಿದೆ.ಇದರಿಂದ ನಮ್ಮ ಶಾಸಕ ಹ್ಯಾರೀಸ್ ಬಹಳ ನೋವು ಅನುಭವಿಸಿದ್ದಾರೆ. ಬಿಜೆಪಿ ಸಚಿವರ ಪುತ್ರರ ಅಪಘಾತದಿಂದ ಇಬ್ಬರು ಮೃತ ಪಟ್ಟಿದ್ದಾರೆ. ಅಪಘಾತ ಮಾಡಿದ ಕಾರು ಬಿಜೆಪಿ ನಾಯಕರದ್ದೇ ಎನ್ನುತ್ತಿದ್ದಾರೆ.ಆದರೆ, ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಲು ಬಿಜೆಪಿ ನಾಯಕರು ಹೋಗಲಿಲ್ಲ ಎಂದರು
ಮಾಧ್ಯಮದವರು ನಲಪಾಡ್ ಪ್ರಕರಣವನ್ನು ಮಾತ್ರ ತೋರಿಸುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಗೆ ಗೌರವ ಕೊಡಬೇಕಾಗಿರುವ ಮಾಧ್ಯಮಗಳೇ ಸುದ್ದಿ ಬಿತ್ತರಿಸುವಲ್ಲಿ ತಾರತಮ್ಯವೆಸಗಿದೆ ಎಂದರು.
ಬೀದರ್ ಶಾಹೀನ್ ಶಾಲೆ ದೇಶದ್ರೋಹ ಪ್ರಕರಣ ನೋಡಿದರೆ ಬಿಜೆಪಿಯಿಂದ ದೌರ್ಜನ್ಯ ಸಾಕಷ್ಟು ನಡೆಯುತ್ತಿದೆ. ಪೊಲೀಸರನ್ನು ಬಳಸಿಕೊಂಡು ಭಯದ ವಾತಾವರಣ ಸೃಷ್ಟಿಮಾಡುತ್ತಿದ್ದಾರೆ. ಬಿಜೆಪಿ ನಡೆ ವಿರೋಧಿಸಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ. ಕೆ. ಸುರೇಶ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


