ರಾಜಕೀಯ

ರಾಜ್ಯದಲ್ಲಿ ದರಿದ್ರತೆಗೆ ಸಿದ್ದರಾಮಯ್ಯ ಮೂಲ ಕಾರಣ- ಸಿ.ಟಿ. ರವಿ

ರಾಜ್ಯದಲ್ಲಿ ದರಿತ್ರತೆ ಉಂಟಾಗಲು ಸಿದ್ದರಾಮಯ್ಯ ಮೂಲ ಕಾರಣ. ಬಡಜನರು ಬೀದಿಯಲ್ಲಿ ನಿಂತು ಕಣ್ಣೀರಿಡುವಂತಾಗಿದ್ದರೆ ಅದಕ್ಕೆ ಮೂಲ ಕಾರಣವೇ ಸಿದ್ದರಾಮಯ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ, ತಿರುಗೇಟು ನೀಡಿದ್ದಾರೆ

ರಾಜ್ಯದಲ್ಲಿ ದರಿದ್ರತೆಗೆ ಸಿದ್ದರಾಮಯ್ಯ ಮೂಲ ಕಾರಣ- ಸಿ.ಟಿ. ರವಿ
ಸಿದ್ದರಾಮಯ್ಯ, ಸಿ.ಟಿ. ರವಿ
Published On :

ಚಿಕ್ಕಮಗಳೂರು: ರಾಜ್ಯದಲ್ಲಿ ದರಿತ್ರತೆ ಉಂಟಾಗಲು ಸಿದ್ದರಾಮಯ್ಯ ಮೂಲ ಕಾರಣ. ಬಡಜನರು  ಬೀದಿಯಲ್ಲಿ ನಿಂತು ಕಣ್ಣೀರಿಡುವಂತಾಗಿದ್ದರೆ ಅದಕ್ಕೆ ಮೂಲ ಕಾರಣವೇ ಸಿದ್ದರಾಮಯ್ಯ ಎಂದು  ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ, ತಿರುಗೇಟು ನೀಡಿದ್ದಾರೆ

ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಪಟ್ಟಣದಲ್ಲಿ ಪ್ರಭೋದಿನಿ ಗುರುಕುಲದಲ್ಲಿ ರವಿವಾರ  ಆಯೋಜಿಸಿದ್ದ ಅರ್ಧಮಂಡಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಸರ್ಕಾರ ದರಿದ್ರ ಸರ್ಕಾರ ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು

ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ  ಅವರು 11 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಲಾಗಿತ್ತು. ಆದರೆ ಮಂಜೂರಾತಿ ನೀಡಿದ ಮನೆಗಳಿಗೆ  ಅವರು ಅನುದಾನ ಮೀಸಲಿಟ್ಟಿರಲಿಲ್ಲ. ಅಂದೇ ಅವರು ಮಂಜೂರಾತಿ ನೀಡಿದ ಮನೆಗಳಿಗೆ ಅನುದಾನ ಮೀಸಲಿಟ್ಟಿದ್ದರೆ ಮನೆಗಳ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಲ್ಲುತ್ತಿರಲಿಲ್ಲ ಎಂದರು. 

ಚುನಾವಣೆ ಸಂದರ್ಭ ಆಗಿದ್ದರಿಂದ ಅವರು ವರ್ಷಕ್ಕೆ 2ರಿಂದ ಮೂರು ಲಕ್ಷ ಮನೆಗಳಿಗೆ  ಮಂಜೂರಾತಿ ನೀಡಿದ್ದರು. ಸದ್ಯ ರಾಜ್ಯ ಸರಕಾರ ದರಿದ್ರದ ಸ್ಥಿತಿ ಬಂದಿಲ್ಲ. ಅಂತಹ ದರಿದ್ರ  ಸ್ಥಿತಿ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿತ್ತು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.