ರಾಜಕೀಯ

ಸಚಿವ ಸ್ಥಾನ ನೀಡಲಿಲ್ಲ, ಕೊನೇ ಪಕ್ಷ ವಿಧಾನಸಭೆ ಉಪಾಧ್ಯಕ್ಷನನ್ನಾಗಿ ಮಾಡಿ: ಆನಂದ್ ಮಾಮನಿ

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ.ನನ್ನನ್ನು ಸಚಿವನಾಗಿ ಮಾಡಬೇಕು ಎಂಬ ಬೇಡಿಕೆ ಇತ್ತು. ಈಗ ಸಂಘ ಪರಿ ವಾರ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಮನವಿ ಮಾಡುತ್ತೇನೆ.

ಸಚಿವ ಸ್ಥಾನ ನೀಡಲಿಲ್ಲ, ಕೊನೇ ಪಕ್ಷ ವಿಧಾನಸಭೆ ಉಪಾಧ್ಯಕ್ಷನನ್ನಾಗಿ ಮಾಡಿ: ಆನಂದ್ ಮಾಮನಿ
ಆನಂದ್ ಮಾಮನಿ
Published On :

ಬೆಂಗಳೂರು: ನನಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ನೀಡು ವಂತೆ ಬಿಜೆಪಿ ಸವದತ್ತಿ ಶಾಸಕ ಆನಂದ ಮಾಮನಿ ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ.ನನ್ನನ್ನು ಸಚಿವನಾಗಿ ಮಾಡಬೇಕು ಎಂಬ ಬೇಡಿಕೆ ಇತ್ತು. ಈಗ ಸಂಘ ಪರಿ ವಾರ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಮನವಿ ಮಾಡುತ್ತೇನೆ.

ನಮ್ಮ ತಂದೆಯವರು ವಿಧಾನಸಭೆ ಉಪಾಧ್ಯಕ್ಷರಾಗಿದ್ದವರು. ಆ ಸ್ಥಾನವನ್ನಾದರು ನನಗೆ ಕೊಟ್ಟು ರಾಜ್ಯದ ಜನರ ಸೇವೆ ಮಾಡುವ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮೂಲ ಬಿಜೆಪಿ ,ವಲಸೆ ಬಿಜೆಪಿ ಎಂಬ ಭಾವನೆ ಇಲ್ಲ. ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿ ವಿನಂತಿ ಮಾಡಿದೆ ಅಷ್ಟೇ. ಬಿಜೆಪಿ ಸರ್ಕಾರ ಜನ ಬಯಸಿದ್ದಂತೆ ಸುಭದ್ರವಾಗಿದೆ. ಬೆಳಗಾವಿ ಭಾಗಕ್ಕೆ ಸಿಂಹಪಾಲು ಕೊಡಿ. ಬೆಳಗಾವಿ ಗ್ರಾಮೀಣ ಭಾಗ ಎಂದು ಪರಿಗಣಿಸಿ ನನ್ನನ್ನು ಮಂತ್ರಿ ಮಾಡಿ . ಅಭಿವೃದ್ಧಿ ಪರ ನಾನು ಕೆಲಸ ಮಾಡುವೆ ಎಂದು ಹೇಳಿದ್ದಾರೆ.

ಇನ್ನು ತಮ್ಮ ಟ್ವೀಟ್ ಬಗ್ಗೆ ಮಾತನಾಡಿದ ಮಾಮನಿ, ಟ್ವೀಟ್ ಅಸಮಾಧಾನ ಬೆಳಗಾವಿಗೆ ಸ್ಥಾನಮಾನ ಸಿಗಲಿ ಅಂತ. ನನಗೆ ಸಚಿವ ಸ್ಥಾನ ಕೊಟ್ಟಿಲ್ಲ. ನಾನು ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದೆ. ಹಾಗಂತ ಅಸಮಾಧಾನ ಇಲ್ಲ. ಸ್ಪೀಕರ್ ಸ್ಥಾನವಾದ್ರೂ ಕೊಡಲಿ. ಡೆಪ್ಯೂಟಿ ಸ್ಪೀಕರ್ ಹುದ್ದೆನಾದ್ರು ಕೊಡಿ ಎಂದು ಮನವಿ ಮಾಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.