ಬಿಜೆಪಿ ಸರ್ಕಾರ ಬರಲು ಯೋಗೇಶ್ವರ್ ತ್ಯಾಗ ಇಲ್ಲ: ಎಂಟಿಬಿ ನಾಗರಾಜ್ಗೆ ಕೊಡಿ!
ಬಿಜೆಪಿ ಸರ್ಕಾರ ಬರಲು ಸಿಪಿ ಯೋಗೇಶ್ವರ್ ತ್ಯಾಗ ಇಲ್ಲ. ಅವರಿಗೆ ಯಾಕೆ ಮಂತ್ರಿ ಸ್ಥಾನ ನೀಡಬೇಕು. ತ್ಯಾಗ ಮಾಡಿರುವ ಎಂಟಿಬಿ ನಾಗರಾಜ್ಗೆ ಕೊಡಬೇಕು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಕುಟುಕಿದ್ದಾರೆ.

ಮೈಸೂರು: ಬಿಜೆಪಿ ಸರ್ಕಾರ ಬರಲು ಸಿಪಿ ಯೋಗೇಶ್ವರ್ ತ್ಯಾಗ ಇಲ್ಲ. ಅವರಿಗೆ ಯಾಕೆ ಮಂತ್ರಿ ಸ್ಥಾನ ನೀಡಬೇಕು. ತ್ಯಾಗ ಮಾಡಿರುವ ಎಂಟಿಬಿ ನಾಗರಾಜ್ಗೆ ಕೊಡಬೇಕು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಕುಟುಕಿದ್ದಾರೆ.
ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ಕೊಡುವುದರಲ್ಲಿ ಯಾವುದೇ ಅಭ್ಯಂತರ ಇಲ್ಲ. ಆದರೆ ಯೋಗೇಶ್ವರ್‌ಗೆ ಮಂತ್ರಿಗಿರಿ ಕೊಡುವುದನ್ನು ಯಾರೂ ಒಪ್ಪುತ್ತಿಲ್ಲ. ಈ ಸಂದರ್ಭದಲ್ಲಿ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ಕೊಡುವ ಅಗತ್ಯವಿದೆಯೇ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್ ಸಿಪಿವೈಗೆ ಸಚಿವ ಸ್ಥಾನ ಕೊಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನನಗೆ ಸಚಿವ ಸ್ಥಾನ ಮಿಸ್ ಆಗಿದೆ. ರಾಜಕಾರಣದಲ್ಲಿ ಕೆಲವು ಸಲ ಹೀಗೆ ಮಿಸ್ ಆಗುತ್ತೆ. ಸಿಎಂ ಬಿಎಸ್ವೈ ಜೊತೆ ನಾನು ಮಾತನಾಡಿದ್ದೇನೆ. ಜೂನ್ ನಂತರದಲ್ಲಿ ಅವಕಾಶ ಸಿಗಬಹುದು ಅಂತ ಸಿಎಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


