ರಾಜಕೀಯ

ಸರ್ಕಾರ ರಚಿಸುವಾಗ ಇಲ್ಲದ ವಿರೋಧ ಈಗ ಏಕೆ: ಸಿಪಿ ಯೋಗೇಶ್ವರ್​​ ಆಕ್ರೋಶ

ಸರ್ಕಾರ ರಚಿಸವಾಗ ಇಲ್ಲದ ವಿರೋಧ, ಈಗ ತಮಗೆ ಮಂತ್ರಿ ಸ್ಥಾನ ನೀಡುತ್ತಿರುವಾಗ ಏಕೆ ವಿರೋಧಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಯೋಗೇಶ್ವರ್​ ಈಗ ತಮ್ಮ ನಾಯಕರ ವಿರುದ್ಧವೇ ಹರಿಹಾಯ್ದಿದ್ದಾರೆ.

ಸರ್ಕಾರ ರಚಿಸುವಾಗ ಇಲ್ಲದ ವಿರೋಧ ಈಗ ಏಕೆ: ಸಿಪಿ ಯೋಗೇಶ್ವರ್​​ ಆಕ್ರೋಶ
ಸಿ.ಪಿ ಯೋಗೇಶ್ವರ್
Published On :

ಬೆಂಗಳೂರು:  ಸರ್ಕಾರ ರಚಿಸವಾಗ ಇಲ್ಲದ ವಿರೋಧ, ಈಗ ತಮಗೆ ಮಂತ್ರಿ ಸ್ಥಾನ ನೀಡುತ್ತಿರುವಾಗ ಏಕೆ ವಿರೋಧಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಯೋಗೇಶ್ವರ್​ ಈಗ ತಮ್ಮ ನಾಯಕರ ವಿರುದ್ಧವೇ ಹರಿಹಾಯ್ದಿದ್ದಾರೆ.

ಪಕ್ಷದಲ್ಲಿ ಮೂಲ ಬಿಜೆಪಿಗರ ಈ ನಡೆ ಬಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮುಂದೆ ಬೇಸರ ವ್ಯಕ್ತಪಡಿಸಿರುವ ಯೋಗೇಶ್ವರ್​​, ಬಿಜೆಪಿ ಸರ್ಕಾರ ರಚನೆಗೆ ಕಾರಣ ಆಗಿರುವುದು ನಾವು. ಶಾಸಕರನ್ನು ಮುಂಬೈಗೆ ಕರೆದೊಯ್ದದ್ದು ನಾವು. ರಾಜೀನಾಮೆ ಕೊಡಿಸಿ, ಸರ್ಕಾರ ರಚನೆ ಮಾಡಿದ್ದೇನೆ. ಆಗ ವಿರೋಧ ತೋರದವರು. ಈಗ ವಿರೋಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ತಮಗೆ ಸಚಿವ ಸ್ಥಾನ ನೀಡಲು ಮುಂದಾಗುತ್ತಿದ್ದಂತೆ ವಿರೋಧಿಸುತ್ತಿರುವ ನಾಯಕರು ಸರ್ಕಾರ ರಚನೆ ಮಾಡುವಾಗ ಏನು ಮಾಡಿದರು?. ಆಗ ಯಾಕೆ ವಿರೋಧಿಸಲಿಲ್ಲ?. ಸರ್ಕಾರ ರಚಿಸುವಾಗ ನನ್ನ ಬಗ್ಗೆ ಯಾವುದೇ ಅಭ್ಯಂತರ ಇವರಿಗೆ ಇರಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.