ಎಪಿಎಂಸಿ ಕಾಯ್ದೆಗೆ ಬೆಂಬಲ: ಜೆಡಿಎಸ್ ನಾಯಕರ ವಿರುದ್ಧ ದತ್ತ ಅಸಮಾಧಾನ
ಯಾವುದೇ ಪಕ್ಷಕ್ಕಾದರೂ ಒಂದು ಸ್ಪಷ್ಟ ನಿಲುವಿರಬೇಕು, ಇಲ್ಲದೇ ಇದ್ದರೇ ನಗೆ ಪಾಟಲಿಗೀಡಾಬೇಕಾಗುತ್ತದೆ, ಆಗ ಪಕ್ಷ ಪಕ್ಷ ದುರ್ಬಲವಾಗುತ್ತದೆ ಎಂದು ಜೆಡಿಎಸ್ ನಾಯಕ ವೈಎಸ್ ವಿ ದತ್ತ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಶಿವಮೊಗ್ಗ: ಯಾವುದೇ ಪಕ್ಷಕ್ಕಾದರೂ ಒಂದು ಸ್ಪಷ್ಟ ನಿಲುವಿರಬೇಕು, ಇಲ್ಲದೇ ಇದ್ದರೇ ನಗೆ ಪಾಟಲಿಗೀಡಾಬೇಕಾಗುತ್ತದೆ, ಆಗ ಪಕ್ಷ ಪಕ್ಷ ದುರ್ಬಲವಾಗುತ್ತದೆ ಎಂದು ಜೆಡಿಎಸ್ ನಾಯಕ ವೈಎಸ್ ವಿ ದತ್ತ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ಗೋಹತ್ಯೆ, ಕಾಯ್ದೆ, ವಿಷಯದಲ್ಲಿ ಜೆಡಿಎಸ್ ತೆಗೆದುಕೊಂಡ ನಿರ್ಧಾರ ಸರಿಯಲ್ಲ ಎಂದು ಟೀಕಿಸಿದ್ದಾರೆ.
ಜೆಡಿಎಸ್ ಜಾತ್ಯತೀತ ಪಕ್ಷವಾಗಿದ್ದು, ತತ್ವ- ಸಿದ್ಧಾಂತಗಳ ನೆಲೆಗಟ್ಟಿನ ಮೇಲೆ ಜೆಡಿಎಸ್ ರೈತರ ಪರ, ಬಡವರ ಪರವಾಗಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಈಗಾಗಲೇ ಇದರ ಬಗ್ಗೆ ವಿಲೀನ ಇಲ್ಲ ಎಂದು ಹೇಳಿದ್ದಾರೆ. ಜೆಡಿಎಸ್‌ನ್ನು ಯಾವುದೇ ಕಾರಣಕ್ಕೂ ಬಿಜೆಪಿಯಲ್ಲಿ ವಿಲೀನಗೊಳಿಸುವುದಿಲ್ಲ ಪುನರುಚ್ಚರಿಸಿದ್ದಾರೆ.
ಜಾತಿ, ಸಮುದಾಯ, ಹಣ ರಾಜಕಾರಣದಲ್ಲಿ ಬೆರೆಯುತ್ತಿದೆ. ಹಾಗಾಗಿ ನಮಗೆ ವಿಧಾನ ಪರಿಷತ್ ಸ್ಥಾನ ಕೈ ತಪ್ಪಲು ಕಾರಣ ಇರಬಹುದು. ಜತೆಗೆ ಇದು ಪಕ್ಷದ ತೀರ್ಮಾನ. ಅಲ್ಲಿ ಇಕ್ಕಟ್ಟು, ಬಿಕ್ಕಟ್ಟು ಇರುತ್ತದೆ. ಅದರಿಂದ ನನಗೇನು ಬೇಜಾರಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


