ರಾಜಕೀಯ

ರಾಯಚೂರು: ಇನ್ಫೋಸಿಸ್ ಪ್ರತಿಷ್ಠಾನದ ಆಹಾರ ಪೊಟ್ಟಣಗಳ ಮೇಲೆ ಬಿಜೆಪಿ ನಾಯಕನ ಫೋಟೋ!

ಖ್ಯಾತ ಬರಹಗಾರ್ತಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ, ಇನ್ ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, ಬ್ರಾಹ್ಮಣ ಸಂಘ ಮತ್ತು ಅಕ್ಷಯಪಾತ್ರೆ ಹೆಸರಿನಡಿ ಅಗತ್ಯವಿರುವ ಬಡ ಕುಟುಂಬಗಳಿಗೆ ವಿತರಿಸಬೇಕಿದ್ದ ಆಹಾರ ಧಾನ್ಯ ಪ್ಯಾಕೆಟ್ ಗಳಿಗೆ ತಮ್ಮ ಹೆಸರು ಹಾಕಿಕೊಂಡು ಪುಕ್ಕಟೆ ಪ್ರಚಾರ ಪಡೆದಿರುವ ಗಂಭೀರ ಆರೋಪ ರಾಯಚೂರು ಜಿಲ್ಲೆಯಿಂದ ಕೇಳಿ ಬಂದಿದೆ.

ರಾಯಚೂರು: ಇನ್ಫೋಸಿಸ್ ಪ್ರತಿಷ್ಠಾನದ ಆಹಾರ ಪೊಟ್ಟಣಗಳ ಮೇಲೆ ಬಿಜೆಪಿ ನಾಯಕನ ಫೋಟೋ!
ಆಹಾರ ಪ್ಯಾಕೇಟ್
Published On :

ಬೆಂಗಳೂರು: ಖ್ಯಾತ ಬರಹಗಾರ್ತಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ, ಇನ್ ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, ಬ್ರಾಹ್ಮಣ ಸಂಘ ಮತ್ತು ಅಕ್ಷಯಪಾತ್ರೆ ಹೆಸರಿನಡಿ ಅಗತ್ಯವಿರುವ ಬಡ ಕುಟುಂಬಗಳಿಗೆ ವಿತರಿಸಬೇಕಿದ್ದ ಆಹಾರ ಧಾನ್ಯ ಪ್ಯಾಕೆಟ್ ಗಳಿಗೆ ತಮ್ಮ ಹೆಸರು ಹಾಕಿಕೊಂಡು ಪುಕ್ಕಟೆ ಪ್ರಚಾರ ಪಡೆದಿರುವ ಗಂಭೀರ ಆರೋಪ ರಾಯಚೂರು ಜಿಲ್ಲೆಯಿಂದ ಕೇಳಿ ಬಂದಿದೆ.

ರಾಜ್ಯಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಆಹಾರ ಧಾನ್ಯ ವಿತರಿಸಲು ರಾಯಚೂರು ಜಿಲ್ಲೆಗೆ ಈ ಮೇಲ್ಕಂಡ ಹೆಸರಿನಡಿ ಆಹಾರ ಪ್ಯಾಕೇಟ್ ಗಳನ್ನು ರವಾನಿಸಲಾಗಿತ್ತು. ಇದಕ್ಕೆ ಲೇಬಲ್ ಗಳನ್ನು ಸಹ ಅಂಟಿಸಲಾಗಿತ್ತು.

ಆದರೆ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಮಿತಿ ಪ್ರಮುಖರೂ ಆದ ತ್ರಿವಿಕ್ರಮ ಜೋಷಿ ಎಂಬುವರು ತಮ್ಮ ಹೆಸರಿನ ಜನ ಸೇವಾ ಪ್ರತಿಷ್ಠಾನದ ಹೆಸರಿರುವ ಲೇಬಲ್ ಮೆತ್ತಿ ಆಹಾರಧಾನ್ಯಗಳ ಪೊಟ್ಟಗಳನ್ನು ವಿತರಣೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.