ರಾಜಕೀಯ

ಬಿಜೆಪಿಯವರೇ ಮತಾಂಧರು: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ; ಸಿದ್ದರಾಮಯ್ಯ

ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಡಿದ್ದು ಸುಳ್ಳಾ? ನಿಜಾವಾ? ಇತಿಹಾಸವನ್ನು ಎಂದೂ ತಿರುಚಲು ಪ್ರಯತ್ನಿಸಬಾರದು. ಟಿಪ್ಪುವನ್ನು ಮತಾಂಧ ಎನ್ನುವ ಬಿಜೆಪಿಯವರೇ ದೊಡ್ಡ ಮತಾಂಧರು.

ಬಿಜೆಪಿಯವರೇ ಮತಾಂಧರು: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ; ಸಿದ್ದರಾಮಯ್ಯ
ಸಿದ್ದರಾಮಯ್ಯ
Published On :

ಬಾಗಲಕೋಟೆ:  ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಡಿದ್ದು ಸುಳ್ಳಾ? ನಿಜಾವಾ? ಇತಿಹಾಸವನ್ನು ಎಂದೂ ತಿರುಚಲು ಪ್ರಯತ್ನಿಸಬಾರದು. ಟಿಪ್ಪುವನ್ನು ಮತಾಂಧ ಎನ್ನುವ ಬಿಜೆಪಿಯವರೇ ದೊಡ್ಡ ಮತಾಂಧರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ಮೈಸೂರು ಹುಲಿ ಎಂದೇ ಕರೆಯಲಾಗುವ ಟಿಪ್ಪು ಸುಲ್ತಾನ್​ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಸಿಎಂ ಬಿ.ಎಸ್​​ಯಡಿಯೂರಪ್ಪ ಸರ್ಕಾರ ಆದೇಶ ಹೊರಡಿಸಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಅಧಿಕಾರಕ್ಕೇರಿದ ಕೂಡಲೇ ರದ್ದುಗೊಳಿಸಿತ್ತು. ಈಗ ಶಾಲಾ ಪಠ್ಯ ಪುಸ್ತಕದಿಂದಲೂ ಟಿಪು ಸುಲ್ತಾನ್ ಅಧ್ಯಾಯ ಕೈ ಬಿಡುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. 

ಟಿಪ್ಪು ಸುಲ್ತಾನ್ ಪಠ್ಯದಿಂದ ಕೈ ಬಿಡುವುದಕ್ಕಾಗಿ ಪಠ್ಯಪುಸ್ತಕ ಸಮಿತಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ವರದಿ ಕೇಳಿದ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಟಿಪ್ಪು ಪಠ್ಯ ಕೈಬಿಟ್ಟರೆ ಇತಿಹಾಸವನ್ನು ತಿರುಚಿದಂತಾಗುತ್ತದೆ.  ಟಿಪ್ಪು ಮತಾಂಧರೆಂದು ಬಿಜೆಪಿಯವರು ಕರೆಯುತ್ತಾರೆ. ಉಳಿದವರು ಯಾರಾದ್ರೂ ಹಾಗೆ ಕರೆದಿದ್ದಾರಾ? ಟಿಪ್ಪುವನ್ನು ಮತಾಂಧ ಎಂದು ಕರೆಯುವ ಬಿಜೆಪಿಯವರೇ ಮತಾಂಧರು ಎಂದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಖಾಯಂ ವಿಪಕ್ಷನಾಯಕರಾಗಿಯೇ ಇರುತ್ತಾರೆ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,  ಯಡಿಯೂರಪ್ಪ ಭವಿಷ್ಯ ಕೂಡ ಹೇಳುತ್ತಾರಾ? ಅವರು ಪುರೋಹಿತರಾ?  ಪಂಚಾಂಗ ಓದುತ್ತಾರಾ? ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.