ರಾಜಕೀಯ

ಸಿಎಂ ಯಡಿಯೂರಪ್ಪ ಅತ್ಯಾಪ್ತ ಲೆಹರ್ ಸಿಂಗ್-ಸಿದ್ದರಾಮಯ್ಯ ಭೇಟಿ: ಮೂಡಿದ ಕೂತೂಹಲ

ಬಿಜೆಪಿ ಎಂಎಲ್ ಸಿ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಲೆಹರ್ ಸಿಂಗ್ ಸಿರೋಯ ಮಂಗಳವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ಅತ್ಯಾಪ್ತ ಲೆಹರ್ ಸಿಂಗ್-ಸಿದ್ದರಾಮಯ್ಯ ಭೇಟಿ: ಮೂಡಿದ ಕೂತೂಹಲ
ಲೆಹರ್ ಸಿಂಗ್
Published On :

ಬೆಂಗಳೂರು: ಬಿಜೆಪಿ ಎಂಎಲ್ ಸಿ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಲೆಹರ್ ಸಿಂಗ್ ಸಿರೋಯ ಮಂಗಳವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಇವರಿಬ್ಬರ ಬೇಟಿ ಹಲವು ಊಹಾ ಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.

ಯಡಿಯೂರಪ್ಪ ಮತ್ತು ಲೆಹರ್ ಸಿಂಗ್ ಸಂಬಂಧ ಹಳಸಿರಬಹುದು, ಇದನ್ನು ಬಂಡವಾಳವಾಗಿಸಿಕೊಂಡು ಬಿಎಸ್ ವೈ ಗೆ ಟಾಂಗ್ ನೀಡಲು ಸಿದ್ದರಾಮಯ್ಯ ಬೇರೆಯೇ ತಂತ್ರ ರೂಪಿಸುತ್ತಿರಬಹುದು, ಲೆಹರ್ ಸಿಂಗ್ ಎರಡು ಬಾರಿ ಎಂಎಲ್ ಸಿಯಾಗಿದ್ದಾರೆ. ಹೀಗಾಗಿ ಮೂರನೇ ಬಾರಿಗೂ ಅವರನ್ನೇ ಆಯ್ಕೆ ಮಾಡಲಾಗುತ್ತದೆಯೇ ಇಲ್ಲವೆ ಎಂಬ ಅನುಮಾನ ಮೂಡಿವೆ, ಏಕೆಂದರೇ ಪಕ್ಷದಲ್ಲಿ ಭಾರೀ ಪೈಪೋಟಿ ಇದೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸಿಯೋರಾ, ದೀಪಾವಳಿ ಹಬ್ಬಕ್ಕೆ ವಿಷ್ ಮಾಡಲು ಬಂದಿದ್ದೆ ಎಂದು ಹೇಳಿದ್ದಾರೆ, 

ಬೆಳಗ್ಗೆ 5.30 ರಿಂದ ತಡರಾತ್ರಿ ಮಲಗುವವರೆಗೂ ಲೆಹರ್ ಸಿಂಗ್ ಯಡಿಯೂರಪ್ಪ ಅವರ ಜೊತೆಗಿರುತ್ತಿದ್ದರು,ಆದರೆ ಇತ್ತೀಜೆಗೆ ಅವರು ಕಾಣಿಸಿಕೊಳ್ಳುತ್ತಿಲ್ಲ, ಹೀಗಾಗಿ ಹಲವು ರೀತಿಯ ಮಾತುಗಳು ಕೇಳಿ ಬರುತ್ತಿವೆ, ಅವರಿಬ್ಬರ ಸಂಬಂಧ ಕ್ಷೀಣಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್, ಸಿದ್ದಾರ್ಥ್ ಗೋಯೆಂಕಾ, ಪ್ರಕಾಶ್ ಮಾಂಡೋತ್,ಹಾಗೂ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ ಇವರೆಲ್ಲರೂ ಲೆಹರ್ ಸಿಂಗ್ ಸಮುದಾಯಕ್ಕೆ ಸೇರಿದವರಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇವರಿಗೆಲ್ಲಾ ಸೂಕ್ತ ಸ್ಥಾನಮಾನ ನೀಡಲಾಗತ್ತಿದೆ.


ಅವರೆಲ್ಲರೂ ಸಿಯೋರಾ ರೀತಿಯ ಬ್ಯಾಕ್ ಗ್ರೌಂಡ್ ನಿಂದ ಬೆಳದು ಬಂದಿವರಾಗಿದ್ದಾರೆ, ಎಲ್ಲರೂ ಉತ್ತರ ಭಾರತ ಮೂಲದವರಾಗಿದ್ದಾರೆ. ಯಡಿಯಬರಪ್ಪ ಅವರು ಈ ಹಿಂದೆ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಿದ ವೇಳೆ ಸಿಯೋರಾ ಅವರು ಬಿಎಸ್ ವೈ ಅವರನ್ನು ರಹಸ್ಯವಾಗಿ ಭೇಟಿ ಮಾಡಿದ್ದರು.

ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಭವಿಷ್ಯದಲ್ಲಿ ರಾಜಕೀಯ ಲೆಕ್ಕಾಚಾರದ ಕಾರಣಕ್ಕಾಗಿ ಭೇಟಿಯಾಗಿರುಬಹುದು ಎಂದು ಹೇಳಲಾಗುತ್ತಿದೆ,

ಮತ್ತೊಂದು ಮೂಲದ ಪ್ರಕಾರ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇದೊಂದ ಸೌಜನ್ಯದ ಭೇಟಿಯಾಗಿದೆ,. ಇದಕ್ಕೆ ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.