ಜಿಲ್ಲೆಯ ಎಲ್ಲಾ ಸಮಸ್ಯೆಗಳನ್ನು ಸುಮಲತಾ ಬಗೆಹರಿಸುತ್ತಿದ್ದಾರೆ: ಅನ್ನದಾನಿ ವ್ಯಂಗ್ಯ
ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ನಾವೆಲ್ಲಾ ಓಡಾಡುತ್ತಿದ್ದೇವೆ. ನಾವು ಏನೂ ಕೆಲಸ ಮಾಡುತ್ತಾ ಇಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ತಿರುಗೇಟು ನೀಡಿದ್ದಾರೆ.

ಮಂಡ್ಯ: ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ನಾವೆಲ್ಲಾ ಓಡಾಡುತ್ತಿದ್ದೇವೆ. ನಾವು ಏನೂ ಕೆಲಸ ಮಾಡುತ್ತಾ ಇಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ತಿರುಗೇಟು ನೀಡಿದ್ದಾರೆ.
ಮಳವಳ್ಳಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನ ನಿತ್ಯ ಜನರ ಕಷ್ಟ ಸುಖವನ್ನು ಸುಮಲತಾ ಅವರೇ ಕೇಳುತ್ತಿದ್ದಾರೆ. ತಾಲೂಕು ಕಚೇರಿ,ಪೊಲೀಸ್ ಠಾಣೆ ಎಲ್ಲೇ ಕೆಲಸ ಇದರೂ ಅವರೇ ಮಾಡುತ್ತಿದ್ದಾರೆ. ಕೆರೆ ತುಂಬಿಸಿದ್ದು, ಪಿಂಚಿಣಿ ಕೊಡಿಸುತ್ತಿರುವುದು ಮೇಡಂ ಸುಮಲತಾ ಅವರೇ .ಜಗಳವಾದರೂ ಬಿಡಿಸಿ ಬುದ್ದಿ ಹೇಳುತ್ತಾ ಇರುವುದೂ ಅವರೇ ಎಂದು ಅವರು ವ್ಯಂಗ್ಯ ಭರಿತ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ನಮ್ಮದೇನಿದೆ, ಮಳವಳ್ಳಿಯ ಕೆರೆಗಳಿಗೆ ನೀರು ತುಂಬಿಸುತ್ತಾ ಇರೋದೇ ಸುಮಲತಾ ಮೇಡಂ ಎಂದು ವ್ಯಂಗ್ಯವಾಡಿದ್ದಾರೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಗೆದ್ದೆ ಎಂದು, ಎಂಟು ಜನ ಶಾಸಕರು ಕೆಲಸ ಮಾಡಬಾರದು ಎನ್ನುವ ಕಾನೂನು ಏನಾದರೂ ಇದೆಯಾ" ಎಂದು ಸುಮಲತಾ, ಎರಡು ದಿನಗಳ ಹಿಂದೆ ಹೇಳಿಕೆಯನ್ನು ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅನ್ನದಾನಿ, "ಕೆರೆಗೆ ನೀರು ತುಂಬಿಸುವುದು ಅವರೇ, ಕೆರೆಗೆ ಪೂಜೆ ಮಾಡುವುದೂ ಅವರೇ.. ನಮ್ಮದೇನಿದ್ದರೂ, ಊಟಮಾಡಿಕೊಂಡು ಹಾಯಾಗಿ ತಿರುಗಾಡಿಕೊಂಡಿರುವುದು" ಎಂದು ಹೇಳಿದ್ದಾರೆ.
"ಇಡೀ ನಮ್ಮ ಮಳವಳ್ಳಿ ತಾಲೂಕಿನ ಕೆಲಸಗಳನ್ನೆಲ್ಲಾ ಅವರೇ ತಮ್ಮ ಹೆಗಲ ಮೇಲೆ ಹಾಕಿಕೊಂಡು ಮಾಡಿಕೊಂಡು ಬರುತ್ತಿದ್ದಾರೆ. ನಾವೇನೂ ಇಲ್ಲಿ ಕೆಲಸಕಾರ್ಯಗಳನ್ನು ಮಾಡುತ್ತಿಲ್ಲ" ಎಂದು ಅನ್ನದಾನಿ ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


