ರಾಜಕೀಯ

ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಆಗಿರಲಿಲ್ಲ, ಒಳ್ಳೆಯ ಶಾಸಕನೂ ಅಲ್ಲ: ಸಿದ್ದು ಸರಣಿ ಟ್ವೀಟ್

ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿರುವ ಮಾಜಿ ಶಾಸಕ ಬಿಸಿ ಪಾಟೀಲ್ ವಿರುದ್ಧ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯ ಕಿಡಿಕಾರಿದ್ದು, ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಆಗಿರಲಿಲ್ಲ, ಒಳ್ಳೆಯ ಶಾಸಕನೂ ಅಲ್ಲ ಎಂದು ಹೇಳಿದ್ದಾರೆ.

ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಆಗಿರಲಿಲ್ಲ, ಒಳ್ಳೆಯ ಶಾಸಕನೂ ಅಲ್ಲ: ಸಿದ್ದು ಸರಣಿ ಟ್ವೀಟ್
ಸಂಗ್ರಹ ಚಿತ್ರ
Published On :

ಹಾವೇರಿ: ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿರುವ ಮಾಜಿ ಶಾಸಕ ಬಿಸಿ ಪಾಟೀಲ್ ವಿರುದ್ಧ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯ ಕಿಡಿಕಾರಿದ್ದು, ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಆಗಿರಲಿಲ್ಲ, ಒಳ್ಳೆಯ ಶಾಸಕನೂ ಅಲ್ಲ ಎಂದು ಹೇಳಿದ್ದಾರೆ.

ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳ ಮೂಲಕ ಗುಡುಗಿದ್ದು ಬಿ.ಸಿ ಪಾಟೀಲ್ ಒಳ್ಳೆಯ ಪೊಲೀಸ್ ಆಗಿರಲಿಲ್ಲ ಹಾಗೂ ಒಳ್ಳೆಯ ಶಾಸಕನೂ ಅಲ್ಲ ಎಂದಿದ್ದಾರೆ.

'ಬಿ.ಸಿ ಪಾಟೀಲ್ ಒಳ್ಳೆ ಪೊಲೀಸ್ ಆಗಿರಲಿಲ್ಲ, ಒಳ್ಳೆ ಶಾಸಕನೂ ಆಗಲಿಲ್ಲ. ಮತ ನೀಡಿ ಗೆಲ್ಲಿಸಿದ ಜನರನ್ನು ಕೇಳದೆ ಬಿಜೆಪಿ ಬಳಿ ಹಣ ತಗೊಂಡು ಪಕ್ಷಾಂತರ ಮಾಡಿ, ಈಗ ಅನರ್ಹ ಎಂಬ ಕಳಂಕ ಹೊತ್ತುಕೊಂಡು ತಿರುಗುತ್ತಿದ್ದಾರೆ. ಮತ್ತೆ ಯಾವ ಮುಖ ಹೊತ್ತುಕೊಂಡು ಜನರ ಬಳಿ ಮತ ನೀಡಿ ಎಂದು ಕೇಳುತ್ತಾರೋ? ಎಂದು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.

ಇದಕ್ಕೂ ಮುನ್ನ ಹಿರೇಕೆರೂರಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬುಧವಾರ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದರು. ಪ್ರಚಾರ ಭಾಷಣದುದ್ದಕ್ಕೂ ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

'ದುಡ್ಡು ಪಡೆದುಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂಬ ಆರೋಪದ ವಿರುದ್ಧ ಬಿಸಿ ಪಾಟೀಲ್ ಮಾನನಷ್ಟ ಮೊಕದ್ದಮೆ ಹೂಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ದುಡ್ಡು ತಗೊಂಡು ಬಿಜೆಪಿ ಸೇರಿದ್ದೀನಿ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡ್ತೀನಿ ಎಂದು ಬಿ.ಸಿ ಪಾಟೀಲ್ ಹೇಳುತ್ತಿದ್ದಾರಂತೆ. ಮಾನವಿದ್ದರೆ ಅಲ್ವೇ ಮೊಕದ್ದಮೆ ಹೂಡುವುದು? ತಾವಾಗಿಯೇ ಬಟ್ಟೆ ಬಿಚ್ಕೊಂಡರೆ ನಾವೇನು‌ ಮಾಡೋಕ್ಕಾಗುತ್ತೆ?ಎಂದು ಕಿಡಿಕಾರಿದರು.

ಇದೇ ಬಿ.ಸಿ ಪಾಟೀಲ್ ತಮ್ಮ ಮತ್ತು ಯಡಿಯೂರಪ್ಪ ನಡುವಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ತಂದು ಉಗ್ರಪ್ಪನವರಿಗೆ ಕೊಟ್ಟಿರಲಿಲ್ವೇ? ಅದರಲ್ಲಿ ನಾವು ನಾಲ್ಕು ಜನ ಬರ್ತೀವಿ ಎಷ್ಟು ಕೊಡ್ತೀರ, ಏನೇನ್ ಕೊಡ್ತೀರ ಅಂತ ಕೇಳಿಲ್ಲವೇ? ಹಣ ತಗೊಂಡು ಬಿಜೆಪಿ ಸೇರಿದ್ದೀರಿ ಅನ್ನೋಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ Mr. ಬಿ.ಸಿ ಪಾಟೀಲ್? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.