ಚುನಾವಣೆಯ ದ್ವೇಷ, ವೈಷಮ್ಯಗಳನ್ನು ಬಿಟ್ಟು ಒಂದೇ ಕುಟುಂಬದಂತೆ ಬದುಕೋಣ- ಸುಮಲತಾ ಅಂಬರೀಷ್
ಚುನಾವಣೆ ನಂತರ ನಮ್ಮ ಊರು ನಮ್ಮ ಸಮಸ್ಯೆಗಳ ವಿಚಾರದಲ್ಲಿ ಸಾಮೂಹಿಕವಾಗಿ ಚರ್ಚಿಸಿ ಅಭಿವೃದ್ದಿಯತ್ತ ಚಿಂತಿಸೋಣ ಎಂದು ಸುಮಲತಾ ಅಂಬರೀಷ್ ಮಂಡ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಮಂಡ್ಯ: ಲೋಕಸಭಾ ಚುನಾವಣಾ ಪ್ರಚಾರದ ಅಖಾಡದಲ್ಲಿ ಎಂತಹ ಪರಿಸ್ಥಿತಿಯಲ್ಲೂ ವೈಯಕ್ತಿಕ ನಿಂದನೆಗಿಳಿಯದೆ,ಆದರ್ಶ ಮತ್ತು ಅಭಿವೃದ್ಧಿಯ ತಳಹದಿಯ ಮೇಲೆಯೆ ಚುನಾವಣೆ ಗೆಲ್ಲಬಹುದು ಎಂಬುದನ್ನು ತೋರಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ , ಗೆದ್ದ ನಂತರವೂ ಹಮ್ಮು- ಬಿಮ್ಮು ಇಲ್ಲದೆ ಅದೇ ಹಾದಿಯಲ್ಲಿ ಸಾಗುವಂತಹ ಸಂದೇಶವೊಂದನ್ನು ನೀಡಿದ್ದಾರೆ.
ಚುನಾವಣೆ ಮುಗಿದಿದೆ ಚುನಾವಣೆಯ ಸಂದರ್ಭದಲ್ಲಿ ಗೆಲುವಿನ ಪ್ರತಿಷ್ಠೆಗಲು ಪರಸ್ಪರ ವೈಷಮ್ಯ ಸಹಜವಾಗಿ ಉಂಟಾಗುತ್ತದೆ ಆದರೆ, ನಾವೆಲ್ಲರೂ ಒಂದೇ ಊರಿನಲ್ಲಿ ಬದುಕುತ್ತಿರುವವರು ಪರಸ್ಪರ ಹೊಂದಾಣಿಕೆಯ ಜೀವ ನಡೆಸುತ್ತಿರುವವರು ಚುನಾವಣೆಯ ದ್ವೇಷ, ವೈಷಮ್ಯಗಳನ್ನು ಬಿಟ್ಟು ಒಂದೇ ಕುಟುಂಬದಂತೆ ಬದುಕೋಣ ಎಂದು ಮನವಿ ಮಾಡಿದ್ದಾರೆ.
— sumalatha ambareesh
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


