ಕುಂದಗೋಳ ಉಪ ಚುನಾವಣೆ: ಪ್ರಚಾರದ ವೇಳೆ ಕಣ್ಣೀರು ಹಾಕಿದ ಡಿಕೆಶಿ
ಕುಂದಗೋಳ ವಿಧಾನಸಭೆ ಉಪಚುನಾವಣೆಯ ಪ್ರಚಾರದ ಉಸ್ತುವಾರಿ ಹೊತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ಗುರುವಾರ ಮಾಜಿ ಸಚಿವ...

Published On :
ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪಚುನಾವಣೆಯ ಪ್ರಚಾರದ ಉಸ್ತುವಾರಿ ಹೊತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ಗುರುವಾರ ಮಾಜಿ ಸಚಿವ ದಿ. ಸಿ.ಎಸ್.ಶಿವಳ್ಳಿ ಅವರನ್ನು ನನೆದು ಕಣ್ಣೀರು ಹಾಕಿದರು.
ಇಂದು ಇಂಗಳಗಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರ ಪರ ಪ್ರಚಾರ ನಡೆಸಿದ ಡಿಕೆಶಿ, ಶಿವಳ್ಳಿ ಅವರು ಜಾತಿ ನೋಡದೆ ಎಲ್ಲರ ಸೇವೆ ಮಾಡಿದರು. ಕೊನೆಯವರೆಗೂ ಬಡವರ ಪರ ಕೆಲಸ ಮಾಡಿದರು. ನಿಮ್ಮ ಮುಂದೆ ನಿಂತು ಮತಯಾಚನೆ ಮಾಡುತ್ತಿದ್ದೇನೆ. ಇದು ಶಿವಳ್ಳಿ ಚುನಾವಣೆಯಲ್ಲ. ನಿಮ್ಮ ಚುನಾವಣೆ. ನಿಮ್ಮೆಲ್ಲರ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ. ಶಿವಳ್ಳಿಯನ್ನು ಉಳಿಸಿಕೊಳ್ಳಿ ಎಂದು ಅಳುತ್ತಲೇ ಹೇಳಿದರು.
ಶಿವಳ್ಳಿ ಅವರ ನಿಧನದ ನಂತರ ಕುಸುಮಕ್ಕ ನಮ್ಮ ಮನೆಗಾಗಲಿ, ದಿನೇಶ್ ಗುಂಡೂರಾವ್ ಅವರ ಮನೆಗಾಗಲೀ ಬಂದು ಚುನಾವಣೆಯಲ್ಲಿ ಸೀಟು ಕೊಡಿ ಎಂದು ಕೇಳಲಿಲ್ಲ. ಕಾರ್ಯಕರ್ತರೇ ನಿರ್ಧರಿಸಿದ್ದಾರೆ. ಕುಸುಮಕ್ಕನನ್ನು ಗೆಲ್ಲಿಸಿಕೊಡಿ ಎಂದು ಹೇಳುತ್ತ ಸಚಿವರು ಭಾವುಕರಾದರು.
ನನ್ನ ಕ್ಷೇತ್ರವನ್ನು ಹೇಗೆ ನೋಡಿಕೊಳ್ಳುತ್ತಿದ್ದೇನೋ, ಹಾಗೇ ಕುಂದಗೋಳವನ್ನೂ ನೋಡಿಕೊಳ್ಳುತ್ತೇನೆ. ನಾನು ಮತಕ್ಕಾಗಿ ಕಣ್ಣೀರು ಹಾಕುವವನಲ್ಲ. ಶಿವಳ್ಳಿ ಜತೆಗಿನ ನನ್ನ ಸ್ನೇಹ ಹಾಗಿತ್ತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


