ರಾಜಕೀಯ

ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ ಶೇವ್ ಮಾಡದಿರಲು ವ್ಯಕ್ತಿ ಶಪಥ!

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ ಶೇವ್ ಮಾಡದಿರುವ ಅವರ ಅಭಿಮಾನಿಯೊಬ್ಬರು ಶಪಥ ಗೈದಿದ್ದಾರೆ.

ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ ಶೇವ್ ಮಾಡದಿರಲು ವ್ಯಕ್ತಿ ಶಪಥ!
ಪರಮೇಶ್ವರ್, ಗೌಡ ಮುದ್ದಯ್ಯ
Published On :

ತುಮಕೂರು: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ ಶೇವ್ ಮಾಡದಿರುವ ಅವರ ಹಿಂಬಾಲಕರೊಬ್ಬರು ಶಪಥ ಗೈದಿದ್ದಾರೆ.

 ಮಧುಗಿರಿಯ ಹುಣಸೆಮರದ ಹಟ್ಟಿ ಬಳಿಯ ನಿವಾಸಿ 53 ವರ್ಷದ ಗೌಡ ಮುದ್ದಯ್ಯ  ಈ ರೀತಿಯ ಶಪಥ ಕೈಗೊಂಡಿರುವ  ಅಭಿಮಾನಿ.
ಯಾದವ ಸಮುದಾಯದವರೊಂದಿಗೆ ನಿನ್ನೆ ನಡೆದ ಸಭೆಯಲ್ಲಿ ಇವರೇ  ಕೇಂದ್ರ ಬಿಂದುವಾಗಿದ್ದರು. ದಲಿತ ನಾಯಕ ಪರಮೇಶ್ವರ್  ಅವರೊಂದಿಗೆ ಮಾತನಾಡಿದರು.
ಗೌಡ ಮುದ್ದಯ್ಯ ಕುರಿತು ಮಾತನಾಡಿದ ಪರಮೇಶ್ವರ್, ನಾನು ಮುಖ್ಯಮಂತ್ರಿ ಆಗುವವರೆಗೂ  ಗಡ್ಡ ಶೇವ್ ಮಾಡುವುದಿಲ್ಲ ಎಂದು 10 ವರ್ಷದ ಹಿಂದಯೇ ಶಪಥ ಮಾಡಿದ್ದಾರೆ.
ಮುಖ್ಯಮಂತ್ರಿಯಾಗುವ ಅವಕಾಶ ಇಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಆದರೂ ಕೇಳುತ್ತಿಲ್ಲ. ಗಡ್ಡ ಶೇವ್ ಮಾಡುವಂತೆ ಸಲಹೆ ನೀಡಿದ್ದೇನೆ ಎಂದು ಹೇಳಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.