ರಾಜಕೀಯ

ನಮ್ಮ ನಿಷ್ಠೆ ಸುಮಲತಾಗೆ, ನಾಯಕರು ಏನೇ ಕ್ರಮ ತೆಗೆದುಕೊಂಡರೂ ಎದುರಿಸಲು ಸಿದ್ಛ: ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು

ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ...

ನಮ್ಮ ನಿಷ್ಠೆ ಸುಮಲತಾಗೆ, ನಾಯಕರು ಏನೇ ಕ್ರಮ ತೆಗೆದುಕೊಂಡರೂ ಎದುರಿಸಲು ಸಿದ್ಛ: ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು
ಮೆರವಣಿಗೆಯಲ್ಲಿ ಸಾಗಿದ ಯಶ್, ಸುಮಲತಾ, ಅಭಿಷೇಕ್, ದರ್ಶನ್
Published On :
ಮಂಡ್ಯ: ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಹೋರಾಡಬೇಕೆಂದು ಮೈತ್ರಿ ಪಕ್ಷಗಳ ಉನ್ನತ ಮಟ್ಟದ ನಾಯಕರು ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರೂ ಕೂಡ ನಿನ್ನೆ ಮಂಡ್ಯದಲ್ಲಿ ಬೇರೆಯದ್ದೇ ಚಿತ್ರಣ ಕಂಡುಬಂತು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಬೆಂಬಲ ನೀಡಿ ನಿನ್ನೆಯ ಸಾರ್ವಜನಿಕ ಸಭೆಯಲ್ಲಿ ಹಾಜರಾಗಿದ್ದರು.
ಇದು ಸಹಜವಾಗಿ ಕಾಂಗ್ರೆಸ್-ಜೆಡಿಎಸ್ ನಾಯಕರ ಇರಿಸುಮುರುಸಿಗೆ ಕಾರಣವಾಗಿದೆ. ನಾಗಮಂಗಲದ ಪರಿಶಿಷ್ಟ ಪಂಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹ, ನಾನು ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ಕ್ರಮ ಎದುರಿಸಲು ಸಿದ್ದವಾಗಿದ್ದೇನೆ. ಅದು ಸಿದ್ದರಾಮಯ್ಯನವರೇ ಆಗಲಿ, ಅಥವಾ ಡಾ ಜಿ ಪರಮೇಶ್ವರ್ ಅವರೇ ನೀಡಲಿ, ಸಮಸ್ಯೆಯಿಲ್ಲ, ಆದರೆ ನನ್ನ ನಿಷ್ಠೆ ಸುಮಲತಾ ಕಡೆಗೆ ಎನ್ನುತ್ತಾರೆ. ಇನ್ನು ನಮ್ಮ ಆತ್ಮ ಗೌರವವನ್ನು ಬದಿಗಿಟ್ಟು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಚನ್ನಪ್ಪ ದೊಡ್ಡಿಯ ಮತ್ತೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮಹೇಶ್,
ಕೃಷಿ ಸಮುದಾಯಕ್ಕೆ ನಾವು ಸಹಾಯ ಮಾಡಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳುವುದೆಲ್ಲ ಸುಳ್ಳು ಎನ್ನುತ್ತಾರೆ. ಅದೇ ಗ್ರಾಮದ ಕಾಂಗ್ರೆಸ್ ನಾಯಕರಾದ ಶಿವಣ್ಣ ಮತ್ತು ಶ್ರೀಕಾಂತ್ ಕೂಡ ಇದೇ ಮಾತನ್ನು ಹೇಳುತ್ತಾರೆ,
ಮಂಗಳ ಗ್ರಾಮದ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬುಲೆಟ್ ಕೃಷ್ಣ ಅವರ ಪುತ್ರ ವಾಸು, ಅಂಬರೀಷ್ ಅವರು ಜನರನ್ನು ಎಂದಿಗೂ ಕಡೆಗಣಿಸುತ್ತಿರಲಿಲ್ಲ. ಕಾವೇರಿ ನೀರು ವಿವಾದ ವಿಚಾರದಲ್ಲಿ ಮಂಡ್ಯ ಜನತೆಗಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಚಿವ ಹುದ್ದೆಯನ್ನು ತ್ಯಜಿಸಿ ಬಂದವರು. ಅಂತಹ ತ್ಯಾಗವನ್ನು ಕುಮಾರಸ್ವಾಮಿ ಹಾಗೂ ಜೆಡಿಎಸ್ ನವರಿಂದ ನಿರೀಕ್ಷಿಸಲು ಸಾಧ್ಯವೇ ಎಂದು ಕೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.