ರಾಜಕೀಯ

ಸುಮಲತಾ ಸುದ್ದಿಗೋಷ್ಠಿಗಾಗಿ ಚಾತಕ ಪಕ್ಷಿಯಂತೆ ಕಾದಿದ್ದ ಮಂಡ್ಯ ಜನತೆ: ನಿರ್ಧಾರ ಪ್ರಕಟಿಸುತ್ತಿದ್ದಂತೆ ಹರ್ಷೋದ್ಘಾರ!

ನಟಿ ಸುಮಲತಾ ಅಂಬರೀಷ್ ತಮ್ಮ ಸ್ಪರ್ಧೆ ಕುರಿತಂತೆ ಸೋಮವಾರ ಪ್ರಕಟಿಸಿದ ಅಧಿಕೃತ ನಿರ್ಧಾರದಿಂದ ಮಂಡ್ಯ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ....

ಸುಮಲತಾ ಸುದ್ದಿಗೋಷ್ಠಿಗಾಗಿ ಚಾತಕ ಪಕ್ಷಿಯಂತೆ ಕಾದಿದ್ದ ಮಂಡ್ಯ ಜನತೆ: ನಿರ್ಧಾರ ಪ್ರಕಟಿಸುತ್ತಿದ್ದಂತೆ ಹರ್ಷೋದ್ಘಾರ!
ಸುಮಲತಾ ಅಂಬರೀಷ್ ಸುದ್ದಿಗೋಷ್ಠಿ
Published On :
ಮೈಸೂರು:  ನಟಿ ಸುಮಲತಾ ಅಂಬರೀಷ್ ತಮ್ಮ ಸ್ಪರ್ಧೆ ಕುರಿತಂತೆ ಸೋಮವಾರ ಪ್ರಕಟಿಸಿದ ಅಧಿಕೃತ ನಿರ್ಧಾರದಿಂದ ಮಂಡ್ಯ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸುಮಲತಾ ಸೋಮವಾರ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುಮಲತಾ ಸುದ್ದಿಗೋಷ್ಠಿಗಾಗಿ ಅಂಬರೀಷ್ ಅಭಿಮಾನಿಗಳು, ಕಾಂಗ್ರೆಸ್.ಕೆಆರ್ ಆರ್ ಎಸ್ ಕಾರ್ಯಕರ್ತರು ಹಾಗೂ ಮಂಡ್ಯ ಜಿಲ್ಲೆ ಜನತೆ ಕಾತುರದಿಂದ ಕಾಯುತ್ತಿದ್ದರು.
ಸುಮಲತಾ ಸುದ್ದಿಗೋಷ್ಠಿಗಾಗಿ ಬೆಂಗಳೂರು ಜನ ಟೆವಿ ಮುಂದೆ ಕಾಯುತ್ತಾ ಕುಳಿತಿದ್ದರು, ಇನ್ನೂ ರಸ್ತೆಬದಿಯ ಟೀ ಅಂಗಡಿ, ಹೋಟೆಲ್ ಗಳಲ್ಲಿ ಅಂಬಿ ಅಭಿಮಾನಿಗಳು ಹಾಗೂ ಮತ್ತಿತರರು ಸಾಮಾಜಿಕ ಮಾಧ್ಯಮಗಳಲ್ಲಿ ಸುಮಲತಾ ಸುದ್ದಿಗೋಷ್ಠಿಗಾಗಿ ಕಾಯುತ್ತಾ ಕುಳಿತಿದ್ದರು.
ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಸುಮಲತಾ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ, ಎರಡು ಪವರ್ ಫುಲ್ ಕುಟುಂಬಗಳ ನಡುವಿನ ಹೋರಾಟ ಇದಾಗಿದೆ. ಮಹಿಳೆಯರು ಹಾಗೂ ಹಲವು ಪಕ್ಷದ ಕಾರ್ಯಕರ್ತರು ಸುಮಲತಾ ಅವರ ಬಗ್ಗೆ ಮೃಧು ದೋರಣೆ ಹೊಂದಿದ್ದಾರೆ ಎಂದು ಜಕ್ಕನಹಳ್ಳಿ ಕ್ರಾಸ್ ನ ಸಂಪತ್ ಎಂಬುವರು ಹೇಳಿದ್ದಾರೆ.
ಮೇಲಕೋಟೆಯಲ್ಲಿ ಸುಮಲತಾ ಅವರ ಪ್ರಚಾರ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸೇರಿದ್ದರು, ಅಂಬರೀಷ್ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಡೆದ ರ್ಯಾಲಿಯಂತೆ ಇದೇ ರೀತಿ ಜನ ಸೇರಿದ್ದರು, ಎಂದು ರೈತ ಸಂಘದ ಮುಖಂಡ ಸತೀಶ್ ಗೌಡ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.