ರಾಜಕೀಯ

ಹಾಸನದಿಂದಲೇ ಸ್ಪರ್ಧಿಸಿ ಎಂದು ದೇವೇಗೌಡರಿಗೆ ಒತ್ತಾಯಿಸುತ್ತಿದ್ದೇವೆ: ಕುತೂಹಲ ಹುಟ್ಟಿಸಿದೆ ರೇವಣ್ಣ ಹೇಳಿಕೆ

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದಲೇ ...

ಹಾಸನದಿಂದಲೇ ಸ್ಪರ್ಧಿಸಿ ಎಂದು ದೇವೇಗೌಡರಿಗೆ ಒತ್ತಾಯಿಸುತ್ತಿದ್ದೇವೆ: ಕುತೂಹಲ ಹುಟ್ಟಿಸಿದೆ ರೇವಣ್ಣ ಹೇಳಿಕೆ
ಹೆಚ್ ಡಿ ರೇವಣ್ಣ(ಸಂಗ್ರಹ ಚಿತ್ರ)
Published On :
ಹಾಸನ: ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಅವರ ಪುತ್ರ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸುವಂತೆ ನಾನು, ಪ್ರಜ್ವಲ್ ಎಲ್ಲ ಒತ್ತಾಯಿಸುತ್ತಿದ್ದೇವೆ. ತಮ್ಮ ರಾಜಕೀಯ ಜೀವನದ 60 ವರ್ಷಗಳನ್ನು ಅವರು ಇಲ್ಲೇ ಪೂರೈಸಬೇಕು ಎಂದು ಬಯಸುತ್ತಿದ್ದೇವೆ ಎಂದರು.
ಹಾಸನದಲ್ಲಿಯೇ ಹುಟ್ಟಿ ಇಲ್ಲಿಯೇ ರಾಜಕೀಯ ಜೀವನ ಕಳೆದ ತಮ್ಮ ತಂದೆಯವರು ಇಲ್ಲಿಯೇ ಮುಂದುವರಿಯಬೇಕು, ತಮ್ಮ 60ನೇ ವರ್ಷದ ರಾಜಕೀಯವನ್ನು ಇಲ್ಲಿಯೇ ಕಳೆಯಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ. ಇದಕ್ಕೆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ, ಈ ಬಗ್ಗೆ ನಾವೆಲ್ಲರೂ ಕುಳಿತುಕೊಂಡು ಚರ್ಚೆ ಮಾಡುತ್ತೇವೆ ಎಂದರು.
ಕಳೆದ ವಾರ ಹಾಸನದಲ್ಲಿ ಹೆಚ್ ಡಿ ರೇವಣ್ಣನ ಪುತ್ರ ಪ್ರಜ್ವಲ್ ರೇವಣ್ಣ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂದು ದೇವೇಗೌಡರು ಘೋಷಣೆ ಮಾಡಿದ್ದರು. ಆದರೆ ಇದೀಗ ಮತ್ತೆ ಎಲ್ಲವೂ ಬದಲಾಗುವ ಸೂಚನೆ ಕಂಡುಬರುತ್ತಿದೆ. ಒಟ್ಟಿನಲ್ಲಿ ದೇವೇಗೌಡರ ಸ್ಪರ್ಧೆಯ ಕ್ಷೇತ್ರ ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.