ಟಿಕೆಟ್ ಪಡೆಯಲು ಆಕಾಂಕ್ಷಿಗಳ ಅಂತಿಮ ಹಂತದ ಕಸರತ್ತು: ಸಿದ್ದರಾಮಯ್ಯ ಭೇಟಿ
ಮಾರ್ಚ್ 11 ರಂದು ಕಾಂಗ್ರೆಸ್ ಸ್ಕ್ಕೀನಿಂಗ್ ಸಮಿತಿ ಸಭೆಯಿದ್ದು, ಕರ್ನಾಟಕ ಸೀಟು ಹಂಚಿಕೆ ವಿಚಾರವಾಗಿ ನಿರ್ಧಾರ ಮಾಡಲಿದ್ದಾರೆ, ಬಾಗಲಕೋಟೆ ಜಿಲ್ಲೆಯ ...

Published On :
ಬೆಂಗಳೂರು: ಮಾರ್ಚ್ 11 ರಂದು ಕಾಂಗ್ರೆಸ್ ಸ್ಕ್ಕೀನಿಂಗ್ ಸಮಿತಿ ಸಭೆಯಿದ್ದು, ಕರ್ನಾಟಕ ಸೀಟು ಹಂಚಿಕೆ ವಿಚಾರವಾಗಿ ನಿರ್ಧಾರ ಮಾಡಲಿದ್ದಾರೆ, ಬಾಗಲಕೋಟೆ ಜಿಲ್ಲೆಯ ಆಕಾಂಕ್ಷಿಗಳು ಶುಕ್ರವಾರ ಸ್ಕ್ರೀನಿಂಗ್ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ತಮ್ಮ ಮೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶ ನೀಡಬೇಕೆಂದು ಕೋರಿದ್ದಾರೆ, ಬಾಗಲಕೋಟೆಯಿಂದ ಬಂದಿದ್ದ ಹಲವು ಕಾಂಗ್ರೆಸ್ ಮುಖಂಡರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ, ವೀಣಾ ಕಾಶಪ್ಪನವರ್ ಮತ್ತು ಬಾಯಕ್ಕ ಮೇಟಿ, ಇಬ್ಬರು ಕೂಡ ಮಾಜಿ ಕಾಂಗ್ರೆಸ್ ಶಾಸಕರ ಕುಟುಂಬಸ್ಥರು.
ಸ್ಥಳೀಯ ನಾಯಕರೊಂದಿಗೆ ಚರ್ಚಿಸಿದ ನಂತರ ಅಭ್ಯರ್ಥಿಗಳ ಹೆಸರನ್ನು ಸಿದ್ದಗೊಳಿಸಲಾಗಿದೆ, ವೀಣಾ ಕಾಶಪ್ಪನವರ್, ಮಹಾಂತೇಶ್ ಉದಾಪುಡಿ, ನಾಣಯ್ಯ ಮಾತಾ, ರಕ್ಷಿತಾ ಇಟಿ ಪ್ರಮುಖರಾಗಿದ್ದಾರೆ.
ಇದರಲ್ಲಿ ಮೂವರ ಹೆಸರನ್ನು ಎಐಸಿಸಿ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲಾಗಿದೆ, ಇನ್ನೂ ಶಾಸಕ ಕೆ. ಸುಧಾಕರ್ ರೆಡ್ಡಿ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಉದ್ದೇಶ ಪೂರ್ವಕವಾಗಿ ಮಾಲಿನ್ಯ. ನಿಯಂತ್ರಣ ಮಂಡಳಿ ಅದ್ಯಕ್ಷ ಸ್ಥಾನದಿಂದ ಕೈ ಬಿಡಲಾಗಿದೆ ಎಂದು ಆರೋಪಿಸಿದ್ದಾರೆ, ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


