ಮನೆಗೆ ಊಟಕ್ಕೆ ಕರೆದು ಗೃಹಸಚಿವರಿಗೆ ಮಾಜಿ ಸಚಿವ ಮಲ್ಲಿಕಾರ್ಜುನ್ ಮಂಗಳಾರತಿ!
ಶಾಮನೂರು ಶಿವಶಂಕರಪ್ಪ ಮನೆಗೆ ಊಟಕ್ಕೆ ಆಗಮಿಸಿದ್ದ ಗೃಹ ಸಚಿವ ಎಂಟಿ ಪಾಟೀಲ್ ಅವರನ್ಹು ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ್ ...

Published On :
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಮನೆಗೆ ಊಟಕ್ಕೆ ಆಗಮಿಸಿದ್ದ ಗೃಹ ಸಚಿವ ಎಂಟಿ ಪಾಟೀಲ್ ಅವರನ್ಹು ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮದ ವಿಷದ ಸಂಬಂಧ ತಮ್ಮ ತಂದೆ ಶಾಮನೂರು ಶಿವಶಂಕರಪ್ಪ ವಿರುದ್ಧ ಮಾತನಾಡಿದ್ದ ಎಂಬಿ ಪಾಟೀಲ್ ಅವರನ್ನು ಮಲ್ಲಿಕಾರ್ಜುನ್ ತರಾಟೆಗೆ ತೆಗೆದುಕೊಂಡರು.
ನಾವು ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದೇವೆ, ನೀನು ನನ್ನ ಅಪ್ಪನ ವಿರುದ್ಧ ಮಾತನಾಡುತ್ತೀಯಾ, ನೀನು ಏನೋ ಈಗ ಮಿನಿಸ್ಟರ್ ಆಗಿದ್ದೀಯಾ ಎಂದು ಕ್ಲಾಸ್ ತೆದೆದುಕೊಂಡಿದ್ದಾರೆ.
ಈ ವೇಳೆ ಮಲ್ಲಿಕಾರ್ಜುನ್ ಅವರನ್ನು ಸಮಾಧಾನ ಪಡಿಸಲು ಪಾಟೀಲ್ ಯತ್ನಿಸಿದರೂ ಅವರು ಸುಮ್ಮನಾಗಿಲಿಲ್ಲ, ಈ ವೇಳೆ ಅಲ್ಲಿ ನೆರೆದಿದ್ದವರನ್ನೆಲ್ಲಾ ಹೊರಗೆ ಕಳುಹಿಸಲಾಯಿತು. ನಂತರ ಮದ್ಯ ಪ್ರವೇಶಿಸಿದ ಶಾಮನೂರು ಶಿವಶಂಕರಲ್ಲಿ ಮಗನನ್ನು ಸಮಾಧಾನ ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


