ರಾಜಕೀಯ

ಮಂಡ್ಯದಲ್ಲಿ ಆಸರೆಯಾಗುತ್ತಾ ಕಮಲ: ಸುಮಲತಾ ಪರವಾಗಿರುವ ಅಂಶಗಳೇನು, ಅವರ ಮುಂದಿನ ಆಯ್ಕೆಗಳೇನು?

ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಈಗಾಗಲೇ ನಿಖಿಲ್ ಕುಮಾರ್ ...

ಮಂಡ್ಯದಲ್ಲಿ ಆಸರೆಯಾಗುತ್ತಾ ಕಮಲ: ಸುಮಲತಾ ಪರವಾಗಿರುವ ಅಂಶಗಳೇನು, ಅವರ ಮುಂದಿನ ಆಯ್ಕೆಗಳೇನು?
ಸುಮಲತಾ ಅಂಬರೀಷ್
Published On :
ಬೆಂಗಳೂರು: ಸುಮಲತಾ ಅಂಬರೀಷ್ ಮತ್ತು ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕಾಗಿ ಹಿಡಿದಿರುವ ಹಠ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ, ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಈಗಾಗಲೇ ನಿಖಿಲ್ ಕುಮಾರ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಇನ್ನೂ ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಹಾಲಿ ಸಂಸದರಿರುವ ಕಾರಣ ಮೈತ್ರಿ ಧರ್ಮದ ಪ್ರಕಾರ ಕ್ಷೇತ್ರವನ್ನು ಜೆಡಿಎಲ್ ಬಿಟ್ಟುಕೊಡಲಾಗಿದೆ, ಹಿಗಾಗಿ ಸುಮಲತಾ ಅಂಬರೀಷ್ ಅವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈಗ ಮುಂದಿನ ದಾರಿ ಆಯ್ಕೆ ಮಾಡುವುದುಸುಮಲತಾ ಅವರಿಗೆ ಬಿಟ್ಟ ವಿಚಾರವಾಗಿದೆ, ಅನುಕಂಪದ ಅಲೆ ಸುಮಲತಾ ಅವರಿಗೆ ವೋಟ್ ಬ್ಯಾಂಕ್ ಆಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ, ಹೀಗಾಗಿ ಸದ್ಯ ಅವರ ಮುಂದೆ ಎರಡು ಆಯ್ಕೆಗಳಿವೆ
1. ಪಕ್ಷೇತರರಾಗಿ ಅಥವಾ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು.
2. ಬಿಜೆಪಿ ಸೇರ್ಪಡೆಯಾಗುವುದು ಅಥವಾ ಬಿಜೆಪಿಯಿಂದ ಬಾಹ್ಯ ಬೆಂಬಲ ಪಡೆಯುವುದು.
ಸುಮಲತಾ ಈಗಾಗಲೇ ಪ್ರಚಾರ ಕಾರ್ಯಕ್ಕಾಗಿ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ, ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಸುಮಾರು 2 ಲಕ್ಷ ಮತ ಗಳಿಸಿ ಪ್ರಮುಖ ಪಾತ್ರ ವಹಿಸಿತ್ತು, ವಿಶೇಷವಾಗಿ ಸುಮಲತಾ ಗೆ ಇದರಿಂದ ಈ ಬಾರಿ ಹೆಚ್ಚಿನ ಪ್ರಯೋಜನವಾಗಲಿದೆ, ಮಂಡ್ಯ ಲೋಕಸಭೆ ಸಮರ ಭಾರೀ ಕುತೂಹಲ ಮೂಡಿಸಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದೆಯಾಗಿದ್ದ ಚಿತ್ರನಟಿ ರಮ್ಯಾ ಕೇವಲ 5 ಸಾವಿರ ಮತಗಳ ಅಂತರದಿಂದ ಸೋತಿದ್ದರು, ಅದರ ಹಿಂದಿನ ಚುನಾವಣೆಯಲ್ಲಿ ರಮ್ಯಾ 60 ಸಾವಿರ ಮತಗಳಿಂದ ಜಯಗಳಿಸಿದ್ದರು, ಬಿಜೆಪಿ ಅಭ್ಯರ್ಥಿಗೆ ಕಳೆದ ಚುನಾವಣೆಯಲ್ಲಿ 2 ಲಕ್ಷ ಮತಗಳು ಬಂದಿದ್ದವು.
ಮಂಡ್ಯ ಕ್ಷೇತ್ರದಿಂದ ನಿಖಿಲ್ ನಾಮ್ ಕಾವಸ್ತೆ ಅಭ್ಯರ್ಥಿ ಮಾತ್ರ, ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ನಿಜವಾದ ಅಭ್ಯರ್ಥಿಗಳಾಗಿರುತ್ತಾರೆ, ಮಂಡ್ಯದಲ್ಲಿ ಸುಮಲತಾ ಅಭ್ಯರ್ಥಿಯಾದರೇ ಜೆಡಿಎಸ್ ನಾಯಕರು ಕೇವಲ ಮಂಡ್ಯದಲ್ಲಿ ಮಾತ್ರ ಹೆಚ್ಚಿನ ಪ್ರಚಾರ  ಮಾಡಬೇಕಾಗುತ್ತದೆ, ರಾಜ್ಯದ ವಿವಿಧ ಭಾಗಗಳಲ್ಲಿನ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೋಳ್ಳಲು ಸಾಧ್ಯವಾಗುವುದಿಲ್ಲ, ಇದು ಬಿಜೆಪಿ ಪಾಲಿಗೆ ವರವಾಗಲಿದೆ ಎಂದು ರಾಜಕೀಯ ವಿಮರ್ಶಕರೊಬ್ಬರು ತಿಳಿಸಿದ್ದಾರೆ.
ಮತದಾನ ಮಾಡುವಾಗ ಮಂಡ್ಯ ಜನತೆ ಭಾವುಕರಾಗುತ್ತಾರೆ, ಗಂಡನನ್ನು ಕಳೆದುಕೊಂಡ ವಿಧವೆ ಅಭ್ಯರ್ಥಿಗಳ ಪರ ಮತ ಚಲಾಯಿಸಿ ಅವರನ್ನು ಗೆಲ್ಲಿಸುತ್ತಾರೆ, ಇದು ಸುಮಲತಾ ಅವರಿಗ ವರವಾಗಿದೆ, ಇದಕ್ಕೆ ಹಲವು ಉದಾಹರಣೆಗಳಿವೆ, ಜೆಡಿಎಸ್ ಶಾಸಕ ಸಿದ್ದರಾಜು ನಿಧನರಾದಾಗ ಅವರ ಪತ್ನಿ ಕಲ್ಪನಾ ಸಿದ್ದರಾಜು ಅವರು 2008 ರಲ್ಲಿ ಮದ್ದೂರಿನಲ್ಲಿ ಜಯ ಗಳಿಸಿದ್ದರು.
1994 ಮತ್ತು 2004 ರಲ್ಲಿ ಶ್ರೀರಂಗ ಪಟ್ಟಣ ಶಾಸಕ ಎ.ಎಸ್ ಬಂಡಿಸಿದ್ದೇಗೌಡ ಪತ್ನಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ ಅವರು ಗೆಲುವು ಸಾಧಿಸಿದ್ದರು. 1999ರಲ್ಲಿ ಎ.ಸಿ ಶ್ರೀಕಂಠಯ್ಯ ಅವರ ಪತಕ್ನಿ ಪಾರ್ವತಮ್ಮ ಶ್ರೀಕಂಠಯ್ಯ ಜಯಗಳಿಸಿದ್ದರು, ಈಗ ಸದ್ಯ ಸುಮಲತಾ ಕೂಡ ತಮ್ಮ ಜನಪ್ರಿಯ ಪತಿ ಹಾಗೂ ಮಂಡ್ಯದ ಗಂಡು ಎಂದೇ ಖ್ಯಾತಿ ಪಡೆದಿದ್ದ ಅಂಬರೀಷ್ ಅವರನ್ನು ಕಳೆದು ಕೊಂಡಿದ್ದಾರೆ. ಹೀಗಾಗಿ ಅನುಕಂಪದ ಅಲೆ ಸುಮಲತಾ ಪರವಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಮನವಿಯನ್ನು ಪರಿಗಣಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ  ನನಗೆ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿಯಿಲ್ಲ, ನಾನು ಯಾವುದೇ ಹುದ್ದೆ ಬೇಕೆಂದು ಅಪೇಕ್ಷೆ ಪಟ್ಟಿಲ್ಲ, ಸ್ಥಾನಮಾನಕ್ಕಾಗಿ ನಾನು ರಾಜಕೀಯಕ್ಕೆ ಬರುತ್ತಿಲ್ಲ, ಅದನ್ನು ಆಲೋಚನೆ ಮಾಡುವುದು ಅಸಹ್ಯ ಎಂದು ನಾನು ಭಾವಿಸುತ್ತೇನೆ, ಪರಿಸ್ಥಿತಿಯ ಲಾಭ ಪಡೆದು ಏನಾದರೂ ಗಳಿಸಿಕೊಳ್ಳುವ ಉದ್ದೇಶ ನನಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ನಾಮಪತ್ರ ಸಲ್ಲಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಮೊದಲು ಅಂಬರೀಷ್ ಅಭಿಮಾನಿಗಳ ಬಳಿ ಮೊದಲು ಚರ್ಚಿಸಿಸ ನಿರ್ಧಾರವನ್ನು ಅವರಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ. 
ಈ ಭಾಗದಲ್ಲಿ ಕಾಂಗ್ರೆಸ್ ಗೆ ಬಹಳ ಮಹತ್ವವಿದೆ,ಕ ಪಕ್ಷದ ಅಭ್ಯರ್ಥಿ ಸ್ಪರ್ಧಿಸಬೇಕು ಎಂಬುದು ಇಲ್ಲಿನ ನಾಯಕ ಆಶಯ, ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸಯದಿದ್ದರೇ ಮುಂದಿನ 10 ವರ್ಷದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತದೆ ಎಂಬ ಭಯ ಅವರನ್ನು ಕಾಡುತ್ತಿದೆ, ನಿಮ್ಮ ಮೊದಲ ಆದ್ಯತೆ ಯಾವುದು ಪಕ್ಷವೋ ಜನವೋ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಜನರೇ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.