ರಾಜಕೀಯ

ಇಬ್ಬರು ಖರ್ಗೆಗಳಿಂದ ಜನರು ಬೇಸತ್ತಿದ್ದಾರೆ: ಉಮೇಶ್ ಜಾಧವ್

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ನಿರೀಕ್ಷೆಯಂತೆ ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜಿನಾಮೆ ನೀಡಿ, ಬಿಜೆಪಿ

ಇಬ್ಬರು ಖರ್ಗೆಗಳಿಂದ ಜನರು ಬೇಸತ್ತಿದ್ದಾರೆ: ಉಮೇಶ್ ಜಾಧವ್
ಉಮೇಶ್ ಜಾಧವ್
Published On :
ಕಲಬುರಗಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ನಿರೀಕ್ಷೆಯಂತೆ ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜಿನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಕಲಬುರಗಿಯಲ್ಲಿ ಖರ್ಗೆ ವಿರೋಧಿ ಅಲೆ ಇದೆ, ಹೀಗಾಗಿ ಖರ್ಗೆ ಅವರನ್ನು ಸೋಲಿಸುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಜಾಧವ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಪ್ರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದಿದ್ದು ಏಕೆ?
ಸಮ್ಮಿಶ್ರ ಸರ್ಕಾರದ ವರ್ತನೆಯಿಂದ ಬೇಸತ್ತಿದ್ದೆ, ಕ್ಷೇತ್ರದ ಅಭಿವೃದ್ಧಿಗಾಗಿ ಅವರನ್ನು ಭೇಟಿ ಮಾಡಲು ಹೋದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಇಬ್ಬರು ಘಂಟೆಗಟ್ಟಲೆ ಕಾಯಿಸುತ್ತಿದ್ದರು. ಈ ಮೂಲಕ ನನಗೆ ಅವಮಾನ ಮಾಡುತ್ತಿದ್ದರು.ಇಬ್ಬರು ಖರ್ಗೆಗಳ ವರ್ತನೆಯಿಂದ ಜನರು ಬೇಸತ್ತಿದ್ದಾರೆ, ಹೀಗಾಗಿ ಜನಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ.
ಪ್ರ: ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಪರವಾಗಿ ಕೆಲಸ ಮಾಡುವ ಅಂಶಗಳು ಯಾವುವು?
ನನ್ನ ಕುಟುಂಬದ ಹಿನ್ನೆಲೆ, ನನ್ನ ಸಮಾಜ ಸೇವೆ, ನನ್ನ ತಂದೆ ಗೋಪಾಲ್ ಜಾಧವ್ ಸ್ವಾತಂತ್ರ್ಯ ಹೋರಾಟಗಾರ, ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಿಸಿದ್ದರು.2013 ಕ್ಕೂ ಮುಂಚೆ ನಾನು ಸರ್ಕಾರಿ ವೈದ್ಯನಾಗಿ ಸೇವೆ ಸಲ್ಲಿಸಿದ್ದೇನೆ,  ಜನರ ಸೇವೆಗಾಗಿ ನಾನು ನನ್ನ ಕೆಲಸಕ್ಕಾಗಿ ರಾಜಿನಾಮೆ ನೀಡಿದೆ, ನಾನು ಮೊದಲ ಬಾರಿ  ಶಾಸಕನಾದಾಗ ಕ್ಷೇತ್ರದಲ್ಲಿ ಹಲವು ಕೆಲಸ ಮಾಡಿದ್ದೇನೆ.
ಪ್ರ: ಮಲ್ಲಿಕಾರ್ಜುನ ಖರ್ಗೆ ಎದುರು ಸ್ಪರ್ಧಿಸುತ್ತಿರುವುದಕ್ಕೆ ನಿಮ್ಮ ಅನಿಸಿಕೆ ಏನು?
ದೈತ್ಯ ಮತ್ತು ಸಾಮಾನ್ಯ ವ್ಯಕ್ತಿಯ ನಡುವಣ ಯುದ್ದ, ಈ ಚುನಾವಣೆಯಲ್ಲಿ ಖರ್ಗೆ ಸೋಲು ಖಚಿತ, ಅದನ್ನು ಜನ ನಿಜ ಮಾಡಿ  ತೋರಿಸುತ್ತಾರೆ, ಅವರೇ ನಮ್ಮ ನಿಜವಾದ ಮಾಸ್ಟರ್,  ಕ್ಷೇತ್ರದಲ್ಲಿ ಕಾಂಗ್ರೆಸ್ ವಿರೋಧಿ ಹಾಗೂ ಖರ್ಗೆ ವಿರೋದಿ ಅಲೆ ನನಗೆ ಸಹಾಯ  ಮಾಡುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.