ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಮಂಡ್ಯದಿಂದ ಮಾತ್ರ; ಸುಮಲತಾ ಪುನರುಚ್ಛಾರ
ರಾಜಕೀಯ ಮತ್ತು ಪ್ರೀತಿ ವಿಭಿನ್ನ. ನನ್ನ ಪತಿ ಅಂಬರೀಷ್ ಗೆ ಮಂಡ್ಯ ಜನತೆ ತೋರಿಸಿದ ಪ್ರೀತಿಯನ್ನು ...

Published On :
ಮೈಸೂರು: ರಾಜಕೀಯ ಮತ್ತು ಪ್ರೀತಿ ವಿಭಿನ್ನ. ನನ್ನ ಪತಿ ಅಂಬರೀಷ್ ಗೆ ಮಂಡ್ಯ ಜನತೆ ತೋರಿಸಿದ ಪ್ರೀತಿಯನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುಮಲತಾ ಹೇಳಿದರು.
ಅಂಬರೀಷ್ ಅವರಿಲ್ಲದ ಜೀವನ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಮಂಡ್ಯ ಜನತೆ ತೋರಿಸಿದ ಪ್ರೀತಿ ಮತ್ತು ಕಾಳಜಿಯಿಂದ ನಮ್ಮ ಕುಟುಂಬ ಅವರ ಅಗಲಿಕೆ ನಂತರ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ ಎಂದರು.
ಮಂಡ್ಯದ ದೊಡ್ಡ ಅರಸೀಕೆರೆಯಲ್ಲಿ ಅಂಬರೀಷ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಸುಮಲತಾ, ಅಂಬರೀಷ್ ಅವರಿಗೆ ತೋರಿಸಿದ ಅಷ್ಟೇ ಪ್ರೀತಿ ಮತ್ತು ಕಾಳಜಿಯನ್ನು ಪುತ್ರ ಅಭಿಷೇಕ್ ಅವರ ಮೇಲೆ ಕೂಡ ತೋರಿಸಿ ಎಂದು ಮಂಡ್ಯದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ ಎಂದರು. ಅಂಬರೀಷ್ ಅವರಿಗೆ ರಾಜಕೀಯದಲ್ಲಿ ಶತ್ರುಗಳಿರಲಿಲ್ಲ. ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದರು ಎಂದರು.
ಆರಂಭದಲ್ಲಿ ತಾವು ರಾಜಕೀಯಕ್ಕೆ ಸೇರಿಸಲು ಯೋಚಿಸಿರಲಿಲ್ಲ. ಅಂಬರೀಷ್ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ತಾವು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ. ತಾವು ಚುನಾವಣೆಗೆ ನಿಲ್ಲುವುದಾದರೆ ಅದು ಮಂಡ್ಯದಿಂದ ಮಾತ್ರ, ಇದನ್ನು ಕಾಂಗ್ರೆಸ್ ನಾಯಕರಿಗೆ ಸಹ ಹೇಳಿದ್ದೇನೆ ಎಂದರು.
ಅಂಬರೀಷ್ ಪುತ್ರ ಅಭಿಷೇಕ್ ಮಾತನಾಡಿ, ತಮ್ಮ ಚಿತ್ರ ಅಮರ್ ಸದ್ಯದಲ್ಲಿಯೇ ಬಿಡುಗಡೆಯಾಗಲಿದ್ದು ಜನರು ಆಶೀರ್ವದಿಸಿ ಚಿತ್ರವನ್ನು ಗೆಲ್ಲಿಸಬೇಕು. ತಾವು ಯಾವತ್ತಿಗೂ ಮಂಡ್ಯ ಜನತೆಯ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದರು.
ಸುಮಲತಾ ಅವರು ಮಂಡ್ಯ ಜನತೆಯ ಅಭಿಪ್ರಾಯ ಪಡೆಯಲು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡರು. ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಸಂವಾದ ನಡೆಸಿದರು. ನಂತರ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ದೇವಾಲಯಗಳಿಗೆ ಭೇಟಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


