ರಾಜಕೀಯ

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಕಿಂಚಿತ್ತೂ ರಾಜಕೀಯ ಅದರಲ್ಲಿಲ್ಲ: ಬಿ ಎಸ್ ಯಡಿಯೂರಪ್ಪ

ಕಳೆದೊಂದು ತಿಂಗಳಿನಿಂದ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರಿಗೆ ...

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಕಿಂಚಿತ್ತೂ ರಾಜಕೀಯ ಅದರಲ್ಲಿಲ್ಲ: ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
Published On :
ಬೆಂಗಳೂರು: ಕಳೆದೊಂದು ತಿಂಗಳಿನಿಂದ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರಿಗೆ ಸಮಯ ಸರಿಯಾಗಿಲ್ಲ ಅಂತ ಕಾಣುತ್ತದೆ. ಕಳೆದ ಬಜೆಟ್ ಅಧಿವೇಶನ ಸಮಯದಲ್ಲಿ ಆಡಿಯೊ ಟೇಪು ಹಗರಣ ಅವರ ವಿರುದ್ಧ ಕೇಳಿಬಂತು. ನಂತರ ಕಳೆದ ವಾರ ಭಾರತ ಪಾಕಿಸ್ತಾನದ ಉಗ್ರರ ನೆಲದ ಮೇಲೆ ಮಾಡಿದ ಏರ್ ಸ್ಟ್ರೈಕ್ ಬಗ್ಗೆ ಹೇಳಿಕೆ ಕೊಟ್ಟದ್ದು ವಿವಾದಕ್ಕೀಡು ಮಾಡಿ ರಾಷ್ಟ್ರಮಟ್ಟದಲ್ಲಿ ಮತ್ತು ಪಾಕಿಸ್ತಾನದಲ್ಲಿ ಕೂಡ ಸುದ್ದಿಯಾಗಿದೆ.
ಇದೀಗ ಯಡಿಯೂರಪ್ಪನವರು ಆಗಿರುವ ತಪ್ಪನ್ನು ಸರಿಪಡಿಸಬೇಕಾಗಿದೆ, ಅದಕ್ಕಾಗಿ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದು ಇಷ್ಟು:
ನಿಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎನ್ನುತ್ತೀರಿ. ಏನನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಿಖರವಾಗಿ ಹೇಳುವಿರಾ?
ಸಂದರ್ಭದಿಂದ ಹೊರಗೆ ನನ್ನ ಹೇಳಿಕೆಯನ್ನು ಓದಿಕೊಂಡು ಅದಕ್ಕೆ ರಾಜಕೀಯ ಬೆರೆಸಲು ಉದ್ದೇಶಪೂರ್ವಕವಾಗಿ ವಿಕೃತಗೊಳಿಸಲಾಗಿದೆ. ಪ್ರಧಾನಿ ಮೋದಿಯವರ ಕ್ರಿಯಾಶೀಲ ನಾಯಕತ್ವ ಮತ್ತು ಉತ್ತಮ ಕೆಲಸಗಳು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 22ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಾಯವಾಗಲಿದೆ ಎಂದು ಹೇಳಿದೆ. ಏರ್ ಸ್ಟ್ರೈಕ್ ದಿನ ಕೂಡ ನಾನು ಮಾತನಾಡುತ್ತಾ, ಇವೆಲ್ಲದರ ಪರಿಣಾಮವಾಗಿ ಬಿಜೆಪಿ ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದೆ. ಬಿಜೆಪಿ ಮತ್ತು ಮೋದಿಯವರ ಸಾರ್ವಜನಿಕ ಪ್ರಭಾವ ಹೆಚ್ಚಾಗಿದೆ. ಒಬ್ಬ ರಾಜಕೀಯ ವ್ಯಕ್ತಿಯಾಗಿ ಕಿಂಚಿತ್ತೂ ರಾಜಕೀಯ ಅಂಶವಿಲ್ಲದೆ ನೀಡಿದ ಹೇಳಿಕೆ.
ನಿಮ್ಮ ಹೇಳಿಕೆಗೆ ನಿಮ್ಮ ಪಕ್ಷದವರಿಂದಲೇ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ, ಜನರಲ್ ವಿ ಕೆ ಸಿಂಗ್ ಅವರು ಮತ್ತು ಕಾಂಗ್ರೆಸ್ , ಜೆಡಿಎಸ್ ಗಳಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಇದಕ್ಕೆ ಏನು ಹೇಳುತ್ತೀರಿ?
ರಾಜಕೀಯದಲ್ಲಿ ನಾನು ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ಹಲವು ಸಂಕಷ್ಟಗಳನ್ನು ಎದುರಿಸಿದ್ದೇನೆ, ಇಲ್ಲಿ ಯಾರೂ ಕೂಡ ನನ್ನ ಹೇಳಿಕೆಯನ್ನು ಅರ್ಥಮಾಡಿಕೊಳ್ಳಲಿಲ್ಲ.
ಒಂದೇ ತಿಂಗಳಲ್ಲಿ ಎರಡನೇ ಬಾರಿ ಬಿಜೆಪಿ ನಾಯಕರು ನಿಮ್ಮಿಂದ ಮುಜುಗರ ಅನುಭವಿಸುವಂತಾಗಿದೆ. ಇದು ನಿಮಗೆ ತೊಂದರೆಯಾಗಲಿದೆಯೇ?
ಈ ಪ್ರಶ್ನೆಯೇ ಒಂದು ಗಾಳಿ ಸುದ್ದಿಯಷ್ಟೆ. ನನ್ನ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ನನ್ನ ಬೆನ್ನೆಲುಬಾಗಿ ಇದ್ದಾರೆ. ಶಿಸ್ತು, ಪ್ರಾಮಾಣಿಕತೆಗೆ ಹೆಸರಾದ ಪಕ್ಷ ಬಿಜೆಪಿ, ಪಕ್ಷಕ್ಕೆ ನಾನು ಆಸ್ತಿಯಿದ್ದಂತೆ.
ಪಕ್ಷಕ್ಕೆ ಸಾಕಷ್ಟು ಮತ ಹಂಚಿಕೆಯನ್ನು ನೀವು ಕಳೆದುಕೊಂಡಿದ್ದೀರಾ?
-ಹಾಗಂತ ಯಾರು ಹೇಳಿದರು? ನಮ್ಮ ಪಕ್ಷಕ್ಕೆ ಹಂಚಿಕೆಯಾಗುವ ಮತಗಳು ಸ್ಪಷ್ಟವಾಗಿ ಭದ್ರವಾಗಿದೆ. ನಿಜ ಹೇಳಬೇಕೆಂದರೆ ಅದು ಹೆಚ್ಚಾಗಿದೆ. ಮೋದಿಯವರನ್ನು ಈ ದೇಶದ ಜನ ಒಬ್ಬ ಸಮರ್ಥ ಆಡಳಿತಗಾರ ಮತ್ತು ಮಹಾನ್ ನಾಯಕನಂತೆ ಕಾಣುತ್ತಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಲು ಬಯಸುತ್ತಾರೆ.
ಪಕ್ಷ ಹಿನ್ನಡೆ ಕಂಡ ಸಂದರ್ಭದಲ್ಲಿ ಕೂಡ ಮಹಾನ್ ನಿಷ್ಠಾವಂತರಿದ್ದರು. ಅವರು ಈಗಲೂ ನಿಷ್ಠಾವಂತರಾಗಿದ್ದಾರೆಯೇ?
-ಕಳೆದ ವಿಧಾನ ಸಭೆ ಚುನಾವಣೆ ಸಮಯದಲ್ಲಿ ಮಾಧ್ಯಮಗಳು, ರಾಜಕೀಯ ಪಂಡಿತರು ಬಿಜೆಪಿ 80ರಿಂದ 85 ಸ್ಥಾನಗಳನ್ನು ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಕಾಂಗ್ರೆಸ್ ನ ಸುಳ್ಳು ಪ್ರಚಾರದ ನಡುವೆ ಕೂಡ ಬಿಜೆಪಿ 104 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಡುತ್ತದೆ ಎಂದು ಹೇಳುತ್ತಿದ್ದರೂ ಕೂಡ ನಮಗೆ ಯಾವುದೇ ತೊಂದರೆಯಿಲ್ಲ. ರಾಜ್ಯದಲ್ಲಿ ನಾನು ಈಗಾಗಲೇ ಪ್ರವಾಸ ಆರಂಭಿಸಿದ್ದೇನೆ.
ಸಣ್ಣ ಬಿಲದಿಂದ ಪ್ರತಿಪಕ್ಷ ಪರ್ವತ ನಿರ್ಮಿಸಲು ಹೊರಟಿದೆಯೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.