ಜನತೆಗೆ ಒಳ್ಳೆಯದಾಗುವುದಾದರೇ ನಾನು ನೀರುಗಂಟಿ ಕೆಲಸ ಮಾಡಲೂ ಸಿದ್ಧ: ಜಿಎಸ್ ಬಸವರಾಜು
ನೀರುಗಂಟಿ ಕೆಲಸ ಮಾಡುವುದು ದೇಶ ಸೇವೆಯೇ ಆಗಿದೆ ಎಂದು ತುಮಕೂರು ಸಂಸದ ಜಿ ಎಸ್ ಬಸವರಾಜ್ ಅವರು ಸಚಿವರಾದ ಎಚ್ ಡಿ ರೇವಣ್ಣ, ...

Published On :
ಬೆಂಗಳೂರು: ನೀರುಗಂಟಿ ಕೆಲಸ ಮಾಡುವುದು ದೇಶ ಸೇವೆಯೇ ಆಗಿದೆ ಎಂದು ತುಮಕೂರು ಸಂಸದ ಜಿ ಎಸ್ ಬಸವರಾಜ್ ಅವರು ಸಚಿವರಾದ ಎಚ್ ಡಿ ರೇವಣ್ಣ, ಶ್ರೀನಿವಾಸ್ ಅವರಿಗೆ ಟಾಂಗ್ ನೀಡಿದ್ದಾರೆ.
ಸಚಿವರು ಗೋರೂರು ಜಲಾಶಯದ ಕೀಲಿಕೊಟ್ಟರೆ ಪ್ರಧಾನಿ ಮೋದಿಯಂತೆ ನಾನೂ ಕಾವಲುಗಾರನಾಗಿ ನೀರುಗಂಟಿಯ ಕೆಲಸ ಮಾಡಲು ಸಿದ್ಧ, ಈ ಕೆಲಸ ಮಾಡಲು ನನಗೆ ಯಾವುದೇ ಮುಜುಗರವಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಜನತೆಗೆ ಒಳ್ಳೆಯದಾಗಲಿದೆ ಅಂದರೆ ನಾನು ನೀರುಗಂಟಿಯ ಕೆಲಸ ಮಾಡಲೂ ಸಿದ್ಧನಿದ್ದೇನೆ ಎಂದು ಸಚಿವರಾದ ರೇವಣ್ಣ ಹಾಗೂ ಎಸ್ ಆರ್ ಶ್ರೀನಿವಾಸ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಬಸವರಾಜು ಸಂಸದರಾಗಲೂ ಯೋಗ್ಯರಾಗಿಲ್ಲ, ಅವರಿಗೆ ಹೇಮಾವತಿ ಜಲಾಶಯದ ಕೀ ಕೊಡುವುದಾಗಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದರು, ಇದಕ್ಕೆ ಬಸವರಾಜ್ ಅವರು ಈ ಮೂಲಕ ತಿರುಗೇಟು ನೀಡಿದ್ದಾರೆ..
17 ಟಿಎಂಸಿ ಬದಲಿಗೆ 45 ಟಿಎಂಸಿ ನೀರನ್ನೂ ಉಪಯೋಗಮಾಡಿಕೊಂಡು ಎಲ್ಲರಿಗೂ ನಾಮ ಹಾಕಿ ನಾಲೆ ಒಡೆಯುವಂಥವರಿಗೆ ನಾವು ಬಲಿಯಾಗುವುದಿಲ್ಲ ಎಂದು ಪರೋಕ್ಷವಾಗಿ ಬಸವರಾಜು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


