ಎಂಬಿ ಪಾಟೀಲ್ ಹೇಳಿದ್ದು ನಿಜ, ಇಬ್ಬರು ಅತೃಪ್ತ ಶಾಸಕರು ನನಗೆ ಫೋನ್ ಮಾಡಿದ್ದರು: ಸಿದ್ದರಾಮಯ್ಯ
ಇಬ್ಬರು ಅತೃಪ್ತ ಶಾಸಕರು ಕರೆ ಮಾಡಿದ್ದು ನಿಜ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ....

Published On :
ಬೆಂಗಳೂರು: ಇಬ್ಬರು ಅತೃಪ್ತ ಶಾಸಕರು ಕರೆ ಮಾಡಿದ್ದು ನಿಜ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ, ಎಂ ಬಿ ಪಾಟೀಲ್ ಹೇಳಿರೋದು ನಿಜ. ಇಬ್ಬರು ಅತೃಪ್ತರು ನನಗೆ ಕರೆ ಮಾಡಿದ್ದರು, ಆದರೆ ನಾನು ಪೋನ್ ರಿಸೀವ್ ಮಾಡಿಲ್ಲ.ಅವರು ತಮ್ಮನ್ನು ಅನರ್ಹತೆ ಮಾಡುತ್ತಾರೆ ಎಂಬ ಭಯದಿಂದ ನನಗೆ ಕರೆ ಮಾಡಿದ್ದರು ಎಂದು ಹೇಳಿದ್ದಾರೆ.
ಅವರ ಫೋನ್ ನಾನು ಯಾಕೆ ರಿಸೀವ್ ಮಾಡಬೇಕು? ಅದು ಮುಖ್ಯವಾದ ವಿಷಯ ಅಲ್ಲ ಎನ್ನುವ ಮೂಲಕ ಅತೃಪ್ತರಿಗೆ ಸ್ಟ್ರಾಂಗ್ಮೆಸೇಜ್ ರವಾನಿಸಿದ್ದಾರೆ ಸಿದ್ಧರಾಮಯ್ಯ.
ಮೂವರು ಶಾಸಕರು ಅನರ್ಹರಾದ ಬೆನ್ನಲ್ಲೇ ಇನ್ನುಳಿದ ಶಾಸಕರಿಗೂ ಅನರ್ಹತೆಯ ಭೀತಿ ಎದುರಾಗಿದೆ, ಹೀಗಾಗಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದರು ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದರು, ಎಂಬಿ ಪಾಟೀಲ್ ಹೇಳಿಕೆಗೆ ಸಿದ್ದರಾಮಯ್ಯ ಸಮರ್ಥನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


