ಯಡಿಯೂರಪ್ಪ ಸರ್ಕಾರದಲ್ಲಿ ಎಷ್ಟು ಮಂದಿ ಉಪಮುಖ್ಯಮಂತ್ರಿಗಳು? ಒಂದು, ಎರಡು, ಮೂರು...?
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದಾಗಿದೆ. ಇನ್ನು ತಮ್ಮ ಸರ್ಕಾರವನ್ನು ಹಾಗೂ ಸಂಪುಟವನ್ನು ಸರಿದೂಗಿಸಿಕೊಂಡು ...

Published On :
ಬೆಂಗಳೂರು: ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದಾಗಿದೆ. ಇನ್ನು ತಮ್ಮ ಸರ್ಕಾರವನ್ನು ಹಾಗೂ ಸಂಪುಟವನ್ನು ಸರಿದೂಗಿಸಿಕೊಂಡು ಹೋಗಬೇಕಾಗಿರುವುದು ಯಡಿಯೂರಪ್ಪ ಮುಂದಿರುವ ದೊಡ್ಡ ಸವಾಲಾಗಿದೆ.
ಹೀಗಾಗಿ ಯಡಿಯೂರಪ್ಪ ಎಷ್ಟು ಮಂದಿಯನ್ನು ಉಪಮುಖ್ಯಮಂತ್ರಿಗಳಾಗಿ ನೇಮಿಸಿಕೊಳ್ಳುತ್ತಾರೆ ಎಂಬುದು ಮುಂದಿನ ಪ್ರಶ್ನೆಯಾಗಿದೆ, ಏಕೆಂದರೇ ಸಂಪುಟ ಸೇರುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವ ಕಾರಣ ಎಲ್ಲರನ್ನು ಸಮಾಧಾನ ಪಡಿಸುವುದು ದೊಡ್ಡ ಕೆಲಸವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ಇಬ್ಬರು ಡಿಸಿಎಂ ಗಳು ಯಡಿಯೂರಪ್ಪ ಜೊತೆ ಕೆಲಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ, ಆದರೆ ಮತ್ತೆ ಕೆಲವರ ಪ್ರಕಾರ ಉಪಮುಖ್ಯಮಂತ್ರಿಗಳ ಪಟ್ಟಿ ಹೆಚ್ಚಿದೆ ಎಂದು ಹೇಳಲಾಗುತ್ತಿದೆ, ಏಕೆಂದರೆ ಬಂಡಾಯ ಶಾಸಕರ ಜೊತೆ ನಡೆದಿರುವ ಡೀಲ್ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆ ಸಂಖ್ಯೆ ಕೂಡ ಏರಲಿದೆ ಎಂಬುದು ಹಲವರ ಊಹೆಯಾಗಿದೆ. ಕೇಂದ್ರ ನಾಯಕರ ಜೊತೆ ಚರ್ಚಿಸಿದ ನಂತರ ಸೋಮವಾರ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿದು ಬಂದಿದೆ.
ಒಕ್ಕಲಿಗರ ನಾಯಕ, ಬೆಂಗಳೂರು ಶಾಸಕ ಆರ್. ಆಶೋಕ್ ಪ್ರಭಾವಿ ಮುಖಂಡರಾಗಿದ್ದಾರೆ, ಬಿಬಿಎಂಪಿ ಮೇಲೆ ಅಶೋಕ್ ಪ್ರಾಬಲ್ಯ ಸಾಕಷ್ಟಿದೆ. ಹಳೇ ಮೈಸೂರು ಭಾಗದ ಜನತೆ ಒಕ್ಕಲಿಗ ನಾಯಕನ ಆಯ್ಕೆ ಬಯಸಿದೆ.ಹೀಗಾಗಿ ಅಶೋಕ್ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.
ಮತ್ತೊಬ್ಬ ಒಕ್ಕಲಿಗ ನಾಯಕ ಸಿಟಿ ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ,. ಇನ್ನೂ ಡಿಸಿಎಂ ಸ್ಥಾನಕ್ಕೆ ಮತ್ತೊಬ್ಬ ಪ್ರಬಲ ಪ್ರತಿಸ್ಪರ್ಧಿ ಕೆ.ಎಸ್ ಈಶ್ವರಪ್ಪ, ಕುರುಬ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ, ಸಿದ್ದರಾಮಯ್ಯ ಅವರಿಗೆ ಪ್ರತಿಯಾಗಿ ಕೌಂಟರ್ ನೀಡಲು ಇರುವ ಮತ್ತೊಬ್ಬ ಕುರುಬ ನಾಯಕ ಎಂದರೇ ಅದು ಈಶ್ವರಪ್ಪ, ಹೀಗಾಗಿ ಈಶ್ವರಪ್ಪ ಅವರನ್ನು ಡಿಸಿಎಂ ಮಾಡುವ ಅನಿವಾರ್ಯತೆ ಎಂದುರಾಗಿದೆ.
ಬಳ್ಳಾರಿ ಜಿಲ್ಲೆಯ ಪ್ರಮುಖ ನಾಯಕರಾಗಿರುವ ಬಿ ಶ್ರೀರಾಮಲು ಅವರು ಡಿಸಿಎಂ ಹುದ್ದೆ ಆಕಾಂಕ್ಷಿಯಾಗಿದ್ದಾರೆ, ಇನ್ನೂ ಪರಿಶಿಷ್ಟ ಜಾತಿ ಪಂಗಡದವರೆಗೊಬ್ಬರಿಗೆ ಡಿಸಿಎಂ ಪಟ್ಟ ನೀಡಬೇಕು ಎಂಬುದು ಕೆಲವರ ವಾದ. ಇದಕ್ಕಾಗಿ ಗೋವಿಂದ ಕಾರಜೊಳ ಅವರ ಹೆಸರು ಕೇಳಿ ಬರುತ್ತಿದೆ.
ಇನ್ನೂ ಬ್ರಾಹ್ಮಣ ಸಮುದಾಯದವರಿಗೂ ಡಿಸಿಎಂ ಪಟ್ಟ ನೀಡಬೇಕು ಎಂಬ ಕೂಗು ಕೇಳಿಬರುತ್ತಿವೆ, ಪರಿಸ್ಥಿತಿ ಹೀಗಿರುವಾದಗ ಸುರೇಶ್ ಕುಮಾರ್ ಮತ್ತ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಡಿಸಿಎಂ ಮಾಡಬೇಕೆಂದು ತೇಳಿ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


