ಸಿಎಂ ವಿಶ್ವಾಸಮತ: 10 ನಿಮಿಷ ಮಾತ್ರ ಮಾತನಾಡಿ - ಶಾಸಕರಿಗೆ ಸ್ಪೀಕರ್ ಸೂಚನೆ
ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ನಿರ್ಣಯದ ಮೇಲಿನ ಚರ್ಚೆ ಸೋಮವಾರವೂ ಮುಂದುವರೆದಿದ್ದು, ಮಾತನಾಡಲು ಪ್ರತಿ ಶಾಸಕರಿಗೆ ಕೇವಲ...

Published On :
ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ನಿರ್ಣಯದ ಮೇಲಿನ ಚರ್ಚೆ ಸೋಮವಾರವೂ ಮುಂದುವರೆದಿದ್ದು, ಮಾತನಾಡಲು ಪ್ರತಿ ಶಾಸಕರಿಗೆ ಕೇವಲ 10 ನಿಮಿಷ ಮಾತ್ರ ನೀಡಲಾಗುವುದು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರು ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯನ್ನು ಇಂದೇ ಪೂರ್ಣಗೊಳಿಸಲು ನಿರ್ಧರಿಸಿದ್ದು, ಶಾಸಕರು ಕೇವಲ 10 ನಿಮಿಷಗಳು ಮಾತ್ರ ಮಾತನಾಡಬೇಕು ಎಂದು ಸೂಚಿಸಿದ್ದಾರೆ.
ಇದೇ ವೇಳೆ ಶಾಸಕರ ಪಕ್ಷಾಂತರ ಪರ್ವದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಮೇಶ್ ಕುಮಾರ್ ಅವರು, ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರೂ ಅವರನ್ನು ಉಲ್ಲೇಖಿಸಿದರು.
"ಕಾಂಗ್ರೆಸ್ ಶಾಸಕರು ಓಡಿಹೋದರು ಎಂದು ಯಾರೋ ಪಂಡಿತ್ ನೆಹರೂಗೆ ಹೇಳಿದರು. ನೆಹರೂ ಅವರು ಶಾಸಕನನ್ನು ಈ ಕಡೆಯಿಂದ ಆ ಕಡೆ ಕರೆದೊಯ್ಯಲು ಸಾಧ್ಯವಾದರೆ ಅದು ವ್ಯಕ್ತಿಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು. ಆದ್ದರಿಂದ, ಒಂದು ಹಂತದಲ್ಲಿ ನೀವು (ಸಿದ್ದರಾಮಯ್ಯ) ಪ್ರಬಲರಾಗಿದಿದ್ದರೆ ಶಾಸಕರು ಓಡಿಹೋಗಲು ಹೇಗೆ ಸಾಧ್ಯವಾಗುತ್ತಿತ್ತು. ನೀವು (ಯಡಿಯೂರಪ್ಪ) ಕಿರುನಗೆ ಮಾಡಬೇಡಿ, ನೀವು ಈ ಮೊದಲು ಶಾಸಕರು ಓಡಿಹೋಗಲು ಸಹಕರಿಸಿದ್ದೀರಿ "ಎಂದು ಸ್ಪೀಕರ್ ಉಭಯ ನಾಯಕರ ಕಾಲೇಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


