ವಿಶ್ವಾಸ ಮತಯಾಚನೆ ಡೌಟು: ಜುಲೈ 22 ರವರೆಗೂ ಸರ್ಕಾರದ ಅನಿಶ್ಚಿತತೆ ಮುಂದುವರಿಕೆ?
: ಕರ್ನಾಟಕ ರಾಜ್ಯ ರಾಜಕೀಯ ಬಿಕ್ಕಟ್ಟು ಸದ್ಯದಲ್ಲಿ ಬಗೆಹರಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ, ಮುಂದಿನ ಸೋಮವಾರದವರೆಗೂ ಈ ಅನಿಶ್ಚಿತತೆ ..

Published On :
ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯ ಬಿಕ್ಕಟ್ಟು ಸದ್ಯದಲ್ಲಿ ಬಗೆಹರಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ, ಮುಂದಿನ ಸೋಮವಾರದವರೆಗೂ ಈ ಅನಿಶ್ಚಿತತೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ಏಕೆಂದರೇ ಅತೃಪ್ತ ಶಾಸಕರ ಮನವೊಲಿಸಲು ಸಮಯ ಬೇಕಾಗಿರುವ ಕಾರಣ ಮುಂದಿನ ಸೋಮವಾರದವರೆಗೆ ಸದನದಲ್ಲಿ ವಿಶ್ವಾಸ ಮತ ಯಾಚನೆ ಸಂಬಂಧ ಚರ್ಚೆ ನಡೆಯಲಿದೆ, ಮೂಲಗಳ ಪ್ರಕಾರ ಗುರುವಾರ ವಿಶ್ವಾಸ ಮತಯಾಚನೆ ಕಾರ್ಯ ಆಗುವುದಿಲ್ಲ,
ಸಮ್ಮಿಶ್ರ ಸರ್ಕಾರದ ಮುಖಂಡರು ಬೇಕಂತಲೇ ಸದನವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಹೀಗಾಗಿ ಮುಂದಿನ ಸೋಮವಾರ ಅಂದರೇ ಜುಲೈ 22 ರವರೆಗೆ ಸದನವನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ., ಸದನದಲ್ಲಿ ಮಾತನಾಡುವರ ಸಂಖ್ಯೆ ಹೆಚ್ಚಿಸಿ ಆ ಮೂಲಕ ಸಮಯವನ್ನು ತಮ್ಮದಾಗಿಸಿಕೊಳ್ಳಲು ಸಮ್ಮಿಶ್ರ ಸರ್ಕಾರದ ಮುಖಂಡರು ಪ್ಲಾನ್ ಮಾಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಜಿ ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ವಿಶ್ವಾಸ ಮತಯಾಚನೆ ವೇಳೆ ಮಾತನಾಡಲಿದ್ದಾರೆ. ಸೋಮವಾರ ಅಥವಾ ಪ್ರಶಸ್ತ ಗಳಿಗೆಯಲ್ಲಿ ಸಿಎಂ ತಮ್ಮ ಹುದ್ದೆಗೆ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ವಿಶ್ವಾಸಮತ ಯಾಚನೆ ಏಕೆ ಅನಿವಾರ್ಯ ಎಂಬದನ್ನು ನಾವು ದಾಖಲೆಯಲ್ಲಿ ತರಲು ಬಯಸುತ್ತೇವೆ, ಸರ್ಕಾರವನ್ನು ಬೀಳಿಸಲು ಅವರು ಎಷ್ಟೆಲ್ಲಾ ಪ್ರಯತ್ನ ಮಾಡಿದರು ಎಂಬ ಬಗ್ಗೆ ಎಲ್ಲರಿಗೂ ತಿಳಿಯಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ನಮ್ಮ ಶಾಸಕರು ವಾಪಸ್ ಬರಲಿದ್ದಾರೆ. ಮುಂಬಯಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅವರನ್ನು ಲಾಕ್ ಮಾಡಲಾಗಿದೆ. ಅವರ ಫೋನ್ ಗಳನ್ನು ಅವರಿಂದ ಕಸಿದುಕೊಳ್ಳಲಾಗಿದೆ, ಸಂಪೂರ್ಣವಾಗಿ ಅವರನ್ನು ಬಂಧನದಲ್ಲಿರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Politicsರಾಜಕೀಯಸಮ್ಮಿಶ್ರ ಸರ್ಕಾರಎಚ್.ಡಿ ಕುಮಾರಸ್ವಾಮಿtrust voteವಿಶ್ವಾಸ ಮತcoalition governmentH.D.Kumaraswamy
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


