ರಾಜಕೀಯ

ಒಂದೆಡೆ ಮೈತ್ರಿ ನಾಯಕರಿಗೆ ಢವಢವ: ಇನ್ನೊಂದೆಡೆ ಕೂಲಾಗಿ ರೆಸಾರ್ಟ್‌ನಲ್ಲಿ ಶಾಸಕರೊಂದಿಗೆ ಬಿಎಸ್‌ವೈ ಕ್ರಿಕೆಟ್!

ನಾಳೆ ಸುಪ್ರೀಂ ತೀರ್ಪು ಏನಾಗಿರಲಿದೆ. ಗುರುವಾರ ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುತ್ತೇವಾ ಎಂದು ಮೈತ್ರಿ ಸರ್ಕಾರದ ನಾಯಕರು ತಲೆ ಕೆಡಿಸಿಕೊಂಡಿದ್ದರೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ...

ಒಂದೆಡೆ ಮೈತ್ರಿ ನಾಯಕರಿಗೆ ಢವಢವ: ಇನ್ನೊಂದೆಡೆ ಕೂಲಾಗಿ ರೆಸಾರ್ಟ್‌ನಲ್ಲಿ ಶಾಸಕರೊಂದಿಗೆ ಬಿಎಸ್‌ವೈ ಕ್ರಿಕೆಟ್!
ಬಿಎಸ್ ವೈ
Published On :
ಬೆಂಗಳೂರು: ನಾಳೆ ಸುಪ್ರೀಂ ತೀರ್ಪು ಏನಾಗಿರಲಿದೆ. ಗುರುವಾರ ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುತ್ತೇವಾ ಎಂದು ಮೈತ್ರಿ ಸರ್ಕಾರದ ನಾಯಕರು ತಲೆ ಕೆಡಿಸಿಕೊಂಡಿದ್ದರೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತ್ರ ರೆಸಾರ್ಟ್ ನಲ್ಲಿ ತಮ್ಮ ಶಾಸಕರೊಂದಿಗೆ ಕ್ರಿಕೆಟ್ ಆಡುವ ಮೂಲಕ ಜಾಲಿಯಾಗಿದ್ದರು. 
ರಮಡ ರೆಸಾರ್ಟ್ ಗೆ ಸಂಜೆ ಆಗಮಿಸಿದ ಯಡಿಯೂರಪ್ಪ ಅವರು ಬಿಜೆಪಿ ಶಾಸಕರೊಂದಿಗೆ ಕ್ರಿಕೆಟ್ ಆಡಿದರು. ಬಿಎಸ್‌ವೈ ಬ್ಯಾಟ್ ಹಿಡಿದು ಚೆಂಡನ್ನು ಹೊಡೆಯುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಧಾನಸಭೆ ಅಧಿವೇಶನ ಮುಂದೂಡಿದ್ದರಿಂದ ಎಲ್ಲಾ ಪಕ್ಷದ ಶಾಸಕರು ರೆಸಾರ್ಟ್ ಗಳಲ್ಲಿ ತಂಗಿದ್ದಾರೆ. ಗುರುವಾರ ನಿಗದಿಯಾಗಿರುವ ವಿಶ್ವಾಸಮತ ಯಾಚನೆ ಸಫಲವಾಗುತ್ತದೆಯೋ, ವಿಫಲವಾಗುತ್ತದೆಯೋ ಎಂಬ ಆತಂಕದಲ್ಲಿ ಮೈತ್ರಿ ನಾಯಕರಿದ್ದಾರೆ. ಆದರೆ ಬಿಜೆಪಿ ಮಾತ್ರ ಯಾವು ಆಂತಕವೂ ಇಲ್ಲದೇ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.