ರಾಜಕೀಯ

ಹೆಸರು ರೇವಣ್ಣ ,ಕೆಲಸ ಕಾರ್ಯಗಳೆಲ್ಲಾ ರಾವಣನ ರೀತಿ : ಕೆಎನ್ ರಾಜಣ್ಣ ಲೇವಡಿ

ಅವರ ಹೆಸರು ರೇವಣ್ಣ ಆದರೆ ಅವರ ಕೆಲಸ ಕಾರ್ಯಗಳೆಲ್ಲಾ ರಾವಣನ ರೀತಿ...

ಹೆಸರು ರೇವಣ್ಣ ,ಕೆಲಸ ಕಾರ್ಯಗಳೆಲ್ಲಾ ರಾವಣನ ರೀತಿ : ಕೆಎನ್ ರಾಜಣ್ಣ ಲೇವಡಿ
ಕೆ ಎನ್ ರಾಜಣ್ಣ
Published On :

ತುಮಕೂರು: ಅವರ ಹೆಸರು ರೇವಣ್ಣ ಆದರೆ ಅವರ ಕೆಲಸ ಕಾರ್ಯಗಳೆಲ್ಲಾ ರಾವಣನ ರೀತಿ. ಹೀಗಾಗಿ ಅವರ ಹೆಸರನ್ನು ರಾವಣ ಎಂದು ಇಡಬೇಕಿತ್ತು. ಅದು ಯಾಕೋ ಅವರಪ್ಪ ರೇವಣ್ಣ ಎಂದು ಇಟ್ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ ಎನ್ ರಾಜಣ್ಣ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಲಕ್ಷ್ಮಣ ಸವದಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರೇವಣ್ಣನ ಕಾಟಕ್ಕೆ ಯಾವ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವುದಿಲ್ಲ.ಅವರಿಗೆಲ್ಲ ರೇವಣ್ಣ ಅಷ್ಟೊಂದು ಕಾಟ ಕೊಟ್ಟಿದ್ದಾರೆ. ಅವರ ಹೆಸರು ಮಾತ್ರ ರೇವಣ್ಣ, ಅವರ ಕಾರ್ಯಗಳೆಲ್ಲಾ ರಾವಣನ ರೀತಿ ಇದೆ. ಅವರ ಅಪ್ಪ ರಾವಣ ಎಂದೇ ಹೆಸರಿಡಬೇಕಿತ್ತು ಆದರೆ ರೇವಣ್ಣ ಎಂದು ನಾಮಕರಣ ಮಾಡಿದ್ದಾರೆ. ಸರ್ಕಾರ ಪತನಗೊಳ್ಳುವುದಕ್ಕೆ ರೇವಣ್ಣನೇ ಕಾರಣ ಎಂದು ರಾಜಣ್ಣ ಟೀಕಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.