ಡ್ರಾಮಾ ಸಾಕ್ ಮಾಡಿ, ನಾವು ನಿಮ್ಮನ್ನು ಭೇಟಿ ಮಾಡಲ್ಲ: ಡಿಕೆಶಿಗೆ ಶಾಸಕರ ಖಡಕ್ ಸಂದೇಶ
ನಾವು ಯಾವುದೇ ಕಾರಣಕ್ಕೂ ಸಚಿವ ಡಿ,ಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವುದಿಲ್ಲ, ನಾವು ಯಾರ ಮಾತು ಕೇಳಿ ಇಲ್ಲಿ ಉಳಿದುಕೊಂಡಿಲ್ಲ,..

Published On :
ಮುಂಬಯಿ: ನಾವು ಯಾವುದೇ ಕಾರಣಕ್ಕೂ ಸಚಿವ ಡಿ,ಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವುದಿಲ್ಲ, ನಾವು ಯಾರ ಮಾತು ಕೇಳಿ ಇಲ್ಲಿ ಉಳಿದುಕೊಂಡಿಲ್ಲ, ನಾವು ರಾಜಕಾರಣದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಅತೃಪ್ತ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ರಾಜಕಾರಣ ಬೇರೆ. ಸ್ನೇಹ ಬೇರೆ, ಮುಂಬಯಿಯಲ್ಲಿ ಶಿವಕುಮಾರ್ ಅವರಿಗೆ ಅವಮಾನ ಆಗುವ ಮೊದಲೇ ಅವರು ಇಲ್ಲಿಂದ ಹೋಗಬೇಕು, ಬೆಂಗಳೂರಿಗೆ ಬಂದಾಗ ನಿಮ್ಮ ಮನೆಗೆ ಬಂದು ಭೇಟಿಯಾಗುತ್ತೇನೆ ಎಂದು ಸೋಮಶೇಖರ್ ತಿಳಿಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಈ ನಾಟಕವನ್ನು ಇಲ್ಲಿಗೆ ನಿಲ್ಲಿಸಬೇಕು, ಇದೆಲ್ಲಾವನ್ನು ಕಳೆದ ಒಂದು ವರ್ಷದಿಂದ ನೋಡಿ, ನೋಡಿ ಸಾಕಾಗಿದೆ, ನಾವು ಇವತ್ತು ಯಾರೋಂದಿಗೂ ಮಾತನಾಡುವ ಮನಸ್ಥಿತಿಯಲ್ಲಿಲ್ಲ, ನಾವು ತುಂಬಾ ಮನನೊಂದಿದ್ದೇವೆ, ಇದೆಲ್ಲಾವನ್ನು ಇಲ್ಲಿಗೆ ಬಂದ್ ಮಾಡಿ, ಇನ್ನೂ ನಾಲ್ಕು ಜನ ಶಾಸಕರು ಇಂದು ನಮ್ಮನ್ನು ಬಂದು ಸೇರಲಿದ್ದಾರೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ. ಅವರು ಸ್ನೇಹಿತರಾಗಿದ್ದರೇ ಇಷ್ಟು ದಿನ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ.
ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರಗಳು ಅಲ್ಲ, ಶಾಶ್ವತ ಮಿತ್ರರೂ ಇಲ್ಲ, ಯಾವುದೂ ಶಾಶ್ವತವಲ್ಲ, ಯಾವುದೇ ಕ್ಷಣದಲ್ಲಿ ಶತ್ರುಗಳು ಮಿತ್ರರಾಗಬಹುದು,ನಾನು ಅತೃಪ್ತ ಶಾಸಕರನ್ನು ಭೇಟಿ ಮಾಡಲು ಹಂಬಲಿಸುತ್ತಿದ್ದೇನೆ, ನನ್ನನ್ನು ಭೇಟಿ ಮಾಡಲು ಅವರ ಹೃದಯ ಮಿಡಿಯುತ್ತಿದೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiPoliticsರಾಜಕೀಯDK ShivakumarMLAಭೇಟಿಶಾಸಕರುmeetಡಿಕೆ ಶಿವಕುಮಾರ್ಮುಂಬಯಿರಮೇಶ್ ಜಾರಕಿಹೊಳಿRamesh JarkiholiST Soma Shekarಎಸ್ .ಟಿ ಸೋಮಶೇಖರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


