ಅಪ್ಪ-ಮಗಳ ಮನವೊಲಿಸಲು ಮುಖಂಡರ ಕಸರತ್ತು: ಸಚಿವ ಸ್ಥಾನ ನೀಡುವುದಾಗಿ ಸೌಮ್ಯಾರೆಡ್ಡಿಗೆ ಕಾಂಗ್ರೆಸ್ ಗಾಳ?
ಜುಲೈ 12 ರಂದು ಭಾರೀ ಪ್ರಮಾಣದಲ್ಲಿ ರಾಜಕೀಯ ಬದಲಾವಣೆಗಳಾಗಲಿವೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯಪಾಲ ವಜೂಬಾಯಿ ವಾಲಾ ...

Published On :
ಬೆಂಗಳೂರು: ಜುಲೈ 12 ರಂದು ಭಾರೀ ಪ್ರಮಾಣದಲ್ಲಿ ರಾಜಕೀಯ ಬದಲಾವಣೆಗಳಾಗಲಿವೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯಪಾಲ ವಜೂಬಾಯಿ ವಾಲಾ ಅಧಿವೇಶನ ಆರಂಭಕ್ಕೂ ಮುನ್ನ ಮೈತ್ರಿ ಸರ್ಕಾರದ ಬಹುಮತ ಸಾಬೀತು ಪಡಿಸುವಂತೆ ಸೂಚಿಸಬಹುದು ಎಂದು ಬಿಜೆಪಿ ಭರವಸೆ ಇಟ್ಟುಕೊಂಡಿದೆ.
ಈಗಾಗಲೇ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮನವೊಲಿಕೆ ಕಸರತ್ತು ಆರಂಭವಾಗಿತ್ತು,ರಾಮಲಿಂಗಾ ರೆಡ್ಡಿ ಪುತ್ರಿಗೆ ಪ್ರಬಲ ಖಾತೆ ನೀಡುವ ಆಮೀಷ ವೊಡ್ಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ರಾಜ್ಯದಲ್ಲಿ ಉಂಟಾಗುತ್ತಿರುವ ಎಲ್ಲಾ ರಾಜಕಯ ಬೆಳವಣಿಗೆಗಳನ್ನು ಕೇಂದ್ರದ ಇಬ್ಬರು ಬಿಜೆಪಿ ನಾಯಕರು ಕಣ್ಣಲ್ಲಿ ಕಣ್ಣಟ್ಟು ಗಮನಿಸುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಜುಲೈ 4 ರಂದು ನಾಲ್ಕೈದು ಬಿಜೆಪಿ ಮುಖಂಡರ ಜೊತೆ ಬಿಜೆಪಿ ರಾಷ್ಚ್ರೀಯ ಕಾರ್ಯದರ್ಶಿ ಮುರುಳೀಧರ ರಾವ್ ರಾಮಲಿಂಗಾ ರೆಡ್ಜಿ ನಿವಾಸಕ್ಕೆ ತೆರಳಿದ್ದರು. ಇಂಜಿನೀಯರ್ ಕೃಷ್ಣರಾಜು ಈ ಭೇಟಿ ಆಯೋಜಿಸಿದ್ದರು ಎಂದು ಹೇಳಲಾಗಿದೆ,.
ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ನಾವು ಪ್ಲಾನ್ ಮಾಡುತ್ತಿದೆ.ಸರ್ಕಾರ ತಾನಾಗೆ ಬಿದ್ದರೇ ಮಾತ್ರ ಸರ್ಕಾರ ರಚಿಸಲು ಹಕ್ಕು ಮಂಡಿಸಲು ಬಿಜೆಪಿ ನಿರ್ಧರಿಸಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.
ಬಿಜೆಪಿ ಸರ್ಕಾರ ಬೀಳಿಸಿತು ಎಂಬ ಅಪವಾದ ಹೊತ್ತಿಕೊಳ್ಳಬಾರದೆಂದು ಕೇಂದ್ರ ಬಿಜೆಪಿ ನಾಯಕರು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಯಾರೋಬ್ಬರು ರಿಸ್ಕ್ ತೆಗೆದು ಕೊಳ್ಳಲು ಮುಂದಾಗುತ್ತಿಲ್ಲ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ರಾಷ್ಟ್ಪಪತಿ ಆಳ್ವಿಕೆ ಹೇರಲಾಗುತ್ತದೆಯೇ ಎಂಬುದನ್ನು ಬಿಜೆಪಿ ಕಾದು ನೋಡುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


