ರಾಜ್ಯಪಾಲರಲ್ಲ, ರಾಷ್ಟ್ರಪತಿಯವರಿಗೆ ರಾಜಿನಾಮೆ ನೀಡಲಿ: ಆನಂದ್ ಸಿಂಗ್ ವಿರುದ್ಧ ಸ್ಪೀಕರ್ ಕೆಂಡಾಮಂಡಲ
ಶಾಸಕ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರ ತಮ್ಮ ಕೈಸೇರಿದೆ. ಆದರೆ ಇನ್ನೊಬ್ಬ ಶಾಸಕರ ರಾಜೀನಾಮೆ ವಿಚಾರ ,.,,

Published On :
ಬೆಂಗಳೂರು: ಶಾಸಕ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರ ತಮ್ಮ ಕೈಸೇರಿದೆ. ಆದರೆ ಇನ್ನೊಬ್ಬ ಶಾಸಕರ ರಾಜೀನಾಮೆ ವಿಚಾರ ಗೊತ್ತಿಲ್ಲ. ಆನಂದ್ ಸಿಂಗ್ ವಿಚಾರದಲ್ಲಿ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಯಾರು ಹೇಳಿದ್ದಾರೆ ? ಅಧಿಕೃತವಾಗಿ ಒಬ್ಬ ಶಾಸಕರು ಮಾತ್ರ ರಾಜೀನಾಮೆ ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸುತ್ತೇನೆ, ಜನರಿಗೆ ಶಾಸಕರ ವರ್ತನೆ ಇಷ್ಟ ಆಗದಿದ್ದಲ್ಲಿ ಅವರನ್ನು ತಿರಸ್ಕರಿಸುವ ಅವಕಾಶ ಸಂವಿಧಾನದಲ್ಲಿ ಇಲ್ಲ. ಇಂಥ ಸಂದರ್ಭದಲ್ಲಿ ಸಾರ್ವಜನಿಕರ ಅಭಿಪ್ರಾಯ ಕೇಳಬೇಕಾಗಿದೆ. ಸಾರ್ವಜನಿಕರು ಯಾರು ಬೇಕಾದರೂ ಶಾಸಕರ ವಿರುದ್ಧ ದೂರು ನೀಡಬಹುದು ಎಂದು ಹೇಳಿದರು.
ಉತ್ತರ ಕೊಡಲು ಆಗದ ವಿಚಾರದ ಬಗ್ಗೆ ತಾವು ಮಾತನಾಡುವುದಿಲ್ಲ. ನಾನು ನನ್ನ ಕೆಲಸವನ್ನು ಅತ್ಯಂತ ಜವಾಬ್ದಾರಿಯಿಂದ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಸ್ಪೀಕರ್ ಉತ್ತರಿಸಿದರು.
ರಾಜೀನಾಮೆ ಕೊಟ್ಟ ಬಳಿಕ ಆನಂದ ಸಿಂಗ್ ರಾಜ್ಯಪಾಲರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನನಗೆ ಪರಮಾಧಿಕಾರ ಇಲ್ಲ. ನನಗೆ ಜವಾಬ್ದಾರಿ ಇದೆ, ಶಾಸಕರಾದವರಿಗೆ ರಾಜೀನಾಮೆ ಯಾರಿಗೆ ಕೊಡಬೇಕು ? ಹೇಗೆ ಕೊಡಬೇಕು ? ಎಂಬ ಅರಿವು ಇರಬೇಕು.
ಆ ಬಗ್ಗೆ ಅವರಿಗೆ ತಿಳುವಳಿಕೆಯೇ ಇಲ್ಲ ಎಂದರೆ ಅದು ನಮ್ಮ ಹಣೆಬರಹ, ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಕೊಟ್ಟಿದ್ದಾರೆ ಅಂದರೆ ಬೇರೆ ಉದ್ದೇಶ ಇರಬೇಕು. ಸಮಯ ಇದ್ದರೆ ರಾಷ್ಟ್ರಪತಿಯವರನ್ನೂ ಭೇಟಿಮಾಡಿ ರಾಜೀನಾಮೆ ಕೊಡಲಿ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


