ರಾಜಕೀಯ

ಜಗತ್ತಿನ ಯಾವ ಪ್ರಯೋಗಾಲಯದಲ್ಲೂ ಸಿಗದ ಕಾಂಗ್ರೆಸ್ 'ಹೈಬ್ರಿಡ್ ತಳಿ' ರಾಹುಲ್ ಗಾಂಧಿ: ಅನಂತ್ ಕುಮಾರ್ ಹೆಗಡೆ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮ ಹೇಳಿಕೆ ಮೂಲಕ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ, ರಾಹುಲ್ ಗಾಂಧಿ ಅವರನ್ನು ಹೆಗಡೆ ಟೀಕಿಸಿದ್ದಾರೆ....

ಜಗತ್ತಿನ ಯಾವ ಪ್ರಯೋಗಾಲಯದಲ್ಲೂ ಸಿಗದ ಕಾಂಗ್ರೆಸ್ 'ಹೈಬ್ರಿಡ್ ತಳಿ' ರಾಹುಲ್ ಗಾಂಧಿ: ಅನಂತ್ ಕುಮಾರ್ ಹೆಗಡೆ
ಅನಂತ ಕುಮಾರ್ ಹೆಗಡೆ
Published On :
ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮ ಹೇಳಿಕೆ ಮೂಲಕ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ, 
ಶಿರಸಿಯಲ್ಲಿ ಮಾತನಾಡಿದ ಅನಂತ ಕುಮಾರ್ ಹೆಗಡೆ, ಸುಳ್ಳು ಹೇಳುವುದನ್ನೇ ರಾಹುಲ್‌ ಕಾಯಕವಾಗಿಸಿಕೊಂಡಿದ್ದಾರೆ. ತಾಯಿ ಕ್ರಿಶ್ಚಿಯನ್, ಅಪ್ಪ ಮುಸಲ್ಮಾನ ಆದರೆ ಮಗ ಹೇಗೆ ಬ್ರಾಹ್ಮಣನಾಗಲು ಸಾಧ್ಯ? ಎಂದು  ಪ್ರಶ್ನಿಸಿದ್ದಾರೆ.
ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲೂ ಇರದ ಹೈಬ್ರಿಡ್ ತಳಿ, ಕಾಂಗ್ರೆಸ್ ಪ್ರಯೋಗಾಲಯದಲ್ಲಿ ಮಾತ್ರ ಸಾಧ್ಯ ಎಂದು ಅನಂತಕುಮಾರ್‌ ಹೆಗಡೆ ವ್ಯಂಗ್ಯವಾಡಿದರು. 
ರಾಹುಲ್ ಗಾಂಧಿ ರಾಫೆಲ್ ಡೀಲ್ ಬಗ್ಗೆ ಮಾತನಾಡುತ್ತಾರೆ, ಆದರೆ ಅವರಿಗೆ ಅದರ ಸ್ಪೆಲಿಂಗ್ ಕೂಡ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ರಫೆಲ್ ಎಂದರೆ ಮೂರು ಗಾಲಿ ಸೈಕಲ್ ಅಂದುಕೊಂಡಿದ್ದಾರೆ.  ದೇಶದ ಹಾಗೂ ಧರ್ಮದ ಕುರಿತು ಗೌರವ ಇಲ್ಲದವರು ಹೇಳುವ ಹಸಿ ಸುಳ್ಳನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.