ಹಾಸನ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಚ್.ಡಿ ರೇವಣ್ಣ- ಪ್ರೀತಮ್ ಗೌಡ ಮಾತಿನ ಚಕಮಕಿ
ರಸ್ತೆ ಅಗಲೀಕರಣದ ವೇಳೆ ಕೆಲವು ಕಟ್ಟಡಗಳನ್ನು ಒಡೆದಿರುವುದಕ್ಕೆ ಶಾಸಕ ಪ್ರೀತಮ್ ಗೌಡ ಮತ್ತು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ...

Published On :
ಹಾಸನ : ರಸ್ತೆ ಅಗಲೀಕರಣದ ವೇಳೆ ಕೆಲವು ಕಟ್ಟಡಗಳನ್ನು ಒಡೆದಿರುವುದಕ್ಕೆ ಶಾಸಕ ಪ್ರೀತಮ್ ಗೌಡ ಮತ್ತು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ನಡುವೆ ಗಣ ರಾಜ್ಯೋತ್ಸವ ವೇದಿಕೆಯಲ್ಲೇ ಮಾತಿನ ಚಕಮಕಿ ನಡೆದಿದೆ.
ಕಾರ್ಯಕ್ರಮದ ನಡುವೆ ರೇವಣ್ಣ ಅವರ ಬಳಿ ಪ್ರೀತಮ್ ಗೌಡ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿಗೆ ಸಂಬಂಧಪಟ್ಟಂತೆ ಮಾತುಕತೆ ಆರಂಭಿಸಿದರು. ಬಿಜೆಪಿ ಬೆಂಬಲಿಗರ ಕಟ್ಟಡಗಳಲ್ಲಿ ಹೆಚ್ಚಾಗಿ ಒಡೆದು ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಪ್ರೀತಮ್ ಗೌಡ ತೀವ್ರ ಅಸಮಾಧಾನಗೊಂಡಿದ್ದರು. ತಾವು ಊರಿನಲ್ಲಿ ಇಲ್ಲದ ವೇಳೆಯಲ್ಲಿ ಕಾರ್ಯಾಚರಣೆ ನಡೆಸಿ ಬಿಜೆಪಿ ಬೆಂಬಲಿಗರ ಕಟ್ಟಡಗಳನ್ನು ಒಡೆದಿದ್ದಕ್ಕಾಗಿ ಪ್ರೀತಮ್ ಗೌಡ, ರೇವಣ್ಣ ಅವರ ಜೊತೆ ವಾಗ್ವಾದಕ್ಕೆ ಮುಂದಾದರು.
ಆದರೆ ಇದಕ್ಕೂ,ತಮಗೂ ಸಂಬಂಧವಿಲ್ಲ. ಹೈಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿ ಅವರು ರೋಹಿಣಿ ಸಿಂಧೂರಿ ಕಾರ್ಯಾಚರಣೆ ನಡೆಸಿದ್ದಾರೆ. ನೀವು ಅವರ ಬಳಿ ಮಾತನಾಡಿ ಎಂದು ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.
ನಂತರ ವಿಧಾನಸಭೆಯಲ್ಲಿ ರೇವಣ್ಣ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಪ್ರೀತಮ್ ಗೌಡ ಹೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ವಿಧಾನಸಭೆಯಲ್ಲಿ ಉತ್ತರಿಸುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
verbal duelಮಾತಿನ ಚಕಮಕಿಎಚ್.ಡಿ ರೇವಣ್ಣH.d RevannaPreetam J GowdaRepublic Day Functiionಪ್ರೀತಮ್ ಗೌಡಗಣರಾಜ್ಯೋತ್ಸವ ಕಾರ್ಯ್ರಮ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


