ಕರ್ನಾಟಕದಲ್ಲಿ ಮೈತ್ರಿಗೆ ಬೆಂಬಲಿಸಿದರೆ ಕನ್ನಡಿಗರಿಗೆ ಮತ್ತೆ ಪ್ರಧಾನಿ ಪಟ್ಟ: ಸಿಎಂ ಕುಮಾರಸ್ವಾಮಿ
ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಕನಿಷ್ಠ ಪಕ್ಷ 20-22 ಸ್ಥಾನ ಲಭ್ಯವಾದದ್ದಾದರೆ ದೇಶಕ್ಕೆ ಇನ್ನೊಮ್ಮೆ ಕನ್ನಡಿಗ ಪ್ರಧಾನಿ ದೊರಕಲಿದ್ದಾರೆ. ಎಂದು.....

Published On :
ಬೆಂಗಳೂರು: ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಕನಿಷ್ಠ ಪಕ್ಷ 20-22 ಸ್ಥಾನ ಲಭ್ಯವಾದದ್ದಾದರೆ ದೇಶಕ್ಕೆ ಇನ್ನೊಮ್ಮೆ ಕನ್ನಡಿಗ ಪ್ರಧಾನಿ ದೊರಕಲಿದ್ದಾರೆ. ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
"ಕನ್ನಡಿಗರು ಆಶೀರ್ವದಿಸಿದರೆ ಏನೆಲ್ಲವೂ ಸಾಧ್ಯವಿದೆ ಇದು (ಕನ್ನಡಿಗ ಪ್ರಧಾನಿ) ಆಗುವುದು ಸಾಧ್ಯವಿಲ್ಲವೆ?" ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕುಮಾರಸ್ವಾಮಿ ಈ ಮಾತು ಹೇಳಿದ್ದಾರೆ.
"1996ರಲ್ಲಿ ಸಹ ಕರ್ನಾಟಕದ ಜನತೆ ಆಶೀರ್ವಾದದೊಡನೆ 16 ಸ್ಥಾನಗಳನ್ನು ಗಳಿಸಿ ಕನ್ನಡಿಗರಾದ ನಮ್ಮ ತಂದೆ ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದರು.ಈ ಬಾರಿ ಮತ್ತೆ 20-22 ಸ್ಥಾನ ಗಳಿಸಿಕೊಟ್ಟದ್ದಾದರೆ ಮತ್ತೆ ಕನ್ನಡಿಗರೊಬ್ಬರು ಪ್ರಧಾನಿಗಳಾಗುವುದು ಸಾಧ್ಯವಿದೆ." ಅವರು ಹೇಳಿದ್ದಾರೆ.
"ಜಯಗಳಿಸಿದ ಕ್ಷೇತ್ರ, ಜಾತಿಯ ಆಧಾರದಲ್ಲಿ ಣಾನೆಂದೂ ರಾಜಕೀಯ ಮಾಡಿಲ್ಲ.ಆದರೆ ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆದಿದೆ." ಸಿಎಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
HD Deve Gowdaಎಚ್.ಡಿ.ಕುಮಾರಸ್ವಾಮಿHD Kumaraswamyಜೆಡಿಎಸ್-ಕಾಂಗ್ರೆಸ್ಎಚ್.ಡಿ. ದೇವೇಗೌಡJDS-congressKannadiga PMಕನ್ನಡಿಗ ಪಿಎಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


