ನಾನು 420, ನಿಮ್ಮ ಮಗ ಸೂಟ್ ಕೇಸ್ ಪಾರ್ಟಿ: ರೇವಣ್ಣಗೆ ರೇಣುಕಾಚಾರ್ಯ ಟಾಂಗ್
ತಾವು "420" ಆಗಿರಬಹುದು. ಆದರೆ ನಿಮ್ಮ ಪುತ್ರ ಪ್ರಜ್ವಲ್ ರೇವಣ್ಣ, ಜೆಡಿಎಸ್ ಸೂಟ್ ಕೇಸ್ ಪಾರ್ಟಿ ಎಂದು ಹೇಳಿದ್ದರು, ಅದಾದ ಬಳಿಕ ಅವರನ್ನು ...

Published On :
ಬೆಂಗಳೂರು: ತಾವು "420" ಆಗಿರಬಹುದು. ಆದರೆ ನಿಮ್ಮ ಪುತ್ರ ಪ್ರಜ್ವಲ್ ರೇವಣ್ಣ, ಜೆಡಿಎಸ್ ಸೂಟ್ ಕೇಸ್ ಪಾರ್ಟಿ ಎಂದು ಹೇಳಿದ್ದರು, ಅದಾದ ಬಳಿಕ ಅವರನ್ನು ಜನತಾ ದಳ ಪ್ರಧಾನ ಕಾರ್ಯದರ್ಶಿಯಾಗಿ ಮಾಡಲಾಯಿತು. ಅವರ ಮಾತನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂದು ಶಾಸಕ ರೇಣುಕಾಚಾರ್ಯ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ,ಲೋಕೋಪಯೋಗಿ ಸಚಿವ ತಮ್ಮನ್ನು “420” ಎಂದು ಹೇಳುವ ಮೂಲಕ ತಮ್ಮ ಸ್ವಾಭಿಮಾನವನ್ನು ಕೆಣಕಿದ್ದಾರೆ. ಹೊನ್ನಾಳಿ ಕ್ಷೇತ್ರದ ಜನರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಸಚಿವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸಚಿವರ ಎಲ್ಲಾ ಹಗರಣಗಳನ್ನು ಬಹಿರಂಗಗೊಳಿಸಲಾಗುವುದು ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಚ್ಚರಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸುಪುತ್ರ ರೇವಣ್ಣ ಅವರು ಸತ್ಯಹರಿಶ್ಚಂದ್ರರಾಗಲಿ, ಆದರ್ಶವಾದಿಯಾಗಲಿ ಅಲ್ಲ. ಹಿರಿಯರಾಗಿರುವ ಅವರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ಸಚಿವರಾಗಿ, ಶಾಸಕರಾಗಿ ಅನುಭವ ಹೊಂದಿರುವ ಅವರು ಈ ರೀತಿಯ ಹೇಳಿಕೆ ನೀಡಬಾರದು. ತಾವು ಸಹ ಹಳ್ಳಿಯಿಂದ ಬಂದಿದ್ದು, ತಮಗೂ ಬಾಯಿಗೆ ಬಂದಂತೆ ನಿಂದಿಸಲು ಬರುತ್ತದೆ. ಆದರೆ ರೇವಣ್ಣ ಅವರಂತೆ ನಡೆದುಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅವನ್ಯಾರೋ ರೇಣುಕಾಚಾರ್ಯ 420, ನಾನು ಯಾಕೆ ಅವನ ಮನೆಗೆ ಹೋಗಲಿ, ಅವನ ಮಾತಿಗೆಲ್ಲಾ ನಾನು ಏಕೆ ಉತ್ತರಿಸಲಿ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಲೋಕೋಪಯೊಗಿ ಸಚಿವ ಎಚ್.ಡಿ. ರೇವಣ್ಣ ನಿನ್ನೆ ಮಾಧ್ಯಮಗಳ ಮುಂದೆ ಕಿಡಿಕಾರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


