ರಾಜಕೀಯ

ಅನಿತಾ ಕುಮಾರಸ್ವಾಮಿ ತೆಲುಗು ಮೂಲದವರು- ಎಚ್ ಡಿಕೆ ಹೇಳಿಕೆಯ ವಿಡಿಯೋ ವೈರಲ್

ಆಂಧ್ರಪ್ರದೇಶದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ , ನನ್ನ ಪತ್ನಿ ಅನಿತಾ ತೆಲುಗು ಮೂಲದವರು ಎಂದು ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ

ಅನಿತಾ ಕುಮಾರಸ್ವಾಮಿ ತೆಲುಗು ಮೂಲದವರು- ಎಚ್ ಡಿಕೆ ಹೇಳಿಕೆಯ ವಿಡಿಯೋ ವೈರಲ್
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ
Published On :

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ  ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿರುವಂತೆ, ಅವರ ಮೂಲವನ್ನು ಕೆದಕುವ ಕೆಲಸದಲ್ಲಿ ನಿರತವಾಗಿದೆ ಜೆಡಿಎಸ್. ಮಂಡ್ಯಕ್ಕೆ ಸುಮಲತಾ ಅವರ ಕೊಡುಗೆ ಏನು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೂಡಾ ಪ್ರಶ್ನಿಸಿದ್ದಾರೆ.

ಆದರೆ, ಆಂಧ್ರಪ್ರದೇಶದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ , ನನ್ನ ಪತ್ನಿ ಅನಿತಾ ತೆಲುಗು ಮೂಲದವರು ಎಂದು ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಿಖಿಲ್ ಕುಮಾರಸ್ವಾಮಿ ಅವರ ಅಭಿನಯದ ಮೊದಲ ಚಿತ್ರ ಜಾಗ್ವಾರ್  ತೆಲುಗು ಆವತರಣಿಕೆ ಬಿಡುಗಡೆ ವೇಳೆ ,  ತೆಲುಗು ಭಾಷೆಯ ಪರಿಚಯದ ಬಗ್ಗೆ ಮಾತನಾಡುವಾಗ ಕುಮಾರಸ್ವಾಮಿ, ನನ್ನ ಪತ್ನಿ ಅನಿತಾ ತೆಲುಗು ಮೂಲದವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜೆಡಿಎಸ್ ಮುಖಂಡರು ಅಂಬರೀಷ್ ಪತ್ನಿ ಸುಮಲತಾ ಅವರ ಮೂಲ ಪ್ರಶ್ನೆ ಮಾಡಿರುವ ಈ ಸಂದರ್ಭದಲ್ಲಿ ಈ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.  ಈ ವಿಡಿಯೋ ಬಗ್ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸುಮಲತಾ ಅವರನ್ನು ಮಂಡ್ಯ ಗೌಡ್ತಿ ಅಲ್ಲ ಎನ್ನುವ ಜೆಡಿಎಸ್ ಮುಖಂಡರು ಅನಿತಾ ಅವರನ್ನು ಮಂಡ್ಯ ಗೌಡ್ತಿ ಎನ್ನುವರೇ ಎಂದು ಅಂಬರೀಷ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.