'ಝೀರೋ ಟ್ರಾಫಿಕಲ್ಲಿ ಓಡಾಡಿದ್ದ ಪರಂ ಸ್ಥಿತಿ ಏನಾಯ್ತು? ಪೊಲೀಸರು ಇಲ್ಲ, ನೊಣ ಹೊಡೆಯೋರು ಇಲ್ಲ'
ಹಿಂದೆ ಮುಂದೆ ಪೊಲೀಸರನ್ನು ಇಟ್ಟುಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ್ದ ಮಾಜಿ ಡಿಸಿಎಂ ಜಿ, ಪರಮೇಶ್ವರ್ ಪರಿಸ್ಥಿತಿ ಏನಾಯ್ತು ನೋಡಿ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ವ್ಯಂಗ್ಯವಾಡಿದ್ದಾರೆ.

ತುಮಕೂರು: ಹಿಂದೆ ಮುಂದೆ ಪೊಲೀಸರನ್ನು ಇಟ್ಟುಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ್ದ ಮಾಜಿ ಡಿಸಿಎಂ ಜಿ, ಪರಮೇಶ್ವರ್ ಪರಿಸ್ಥಿತಿ ಏನಾಯ್ತು ನೋಡಿ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ವ್ಯಂಗ್ಯವಾಡಿದ್ದಾರೆ.
ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ನೀಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಣ್ಣ, ಆ ಪುಣ್ಯಾತ್ಮನಿಗೆ ಕಷ್ಟದಲ್ಲಿದ್ದಾಗ ಸಹಾಯ ಮಾಡಿ ಶಾಸಕನಾಗಿ ಮಾಡಿದೆ. ಆತ ಗೆದ್ದು ಶಾಸಕನಾಗಿ ಡಿಸಿಎಂ ಆದ.
ಹಿಂದೂ ಮುಂದೂ ಪೊಲೀಸರನ್ನು ಇಟ್ಟಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ. ಈಗ ಅಧಿಕಾರ ಇಲ್ಲ ಪರಿಸ್ಥಿತಿ ಹೇಗಾಗಿದೆ ನೋಡಿ. ಪೊಲೀಸರು ಹಿಂದೂ ಇಲ್ಲ ಮುಂದೂ ಇಲ್ಲ. ನೊಣ ಹೊಡಿಯೋರೂ ಇಲ್ಲ ಎಂದು ವ್ಯಂಗ್ಯವಾಡಿದರು.
ಒಂದೇ ಬೇಂಚಲ್ಲಿ ಕುಳಿತು ಕಲಿತವರು. ಹಾಗಾಗಿ ಅವನನ್ನು ಕೊರಟಗೆರೆಯಿಂದ ಗೆಲ್ಲಿಸಿಕೊಂಡು ಬಂದೇ. ಆತನಿಗೆ ಉಪಕಾರ ಸ್ಮರಣೆ ಇಲ್ಲ. ನಾನು ಅಧ್ಯಕ್ಷನಾಗಿದ್ದ ಡಿಸಿಸಿ ಬ್ಯಾಂಕನ್ನು ಸೂಪರ್ ಸೀಡ್ ಮಾಡುವ ಮೂಲಕ ನನ್ನ ಅಧಿಕಾರ ಕಿತ್ತುಕೊಳ್ಳುವ ಪಿತೂರಿ ಮಾಡಿದ್ದ ಎಂದು ಪರಮೇಶ್ವರ್ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


