ಸಿಎಂ ಬಿಎಸ್ ಯಡಿಯೂರಪ್ಪ ಈಸ್ ನೋ ಮೋರ್ ಎ ಲೀಡರ್: ಡಿಕೆ ಶಿವಕುಮಾರ್
ಬಿಜೆಪಿಗೆ ಹೋದ ಮೇಲೂ ಶಾಸಕರು ಸಿದ್ದರಾಮಯ್ಯ ಅವರನ್ನೇ ತಮ್ಮ ನಾಯಕರು ಎಂದು ಹೇಳುವುದನ್ನು ಕೇಳಿದರೆ ತಮಗೆ ಬಹಳ ಖುಷಿ ಆಗುತ್ತದೆ. ಬಿಜೆಪಿಯಲ್ಲಿ 'ಯಡಿಯೂರಪ್ಪ ಈಸ್ ನೋ ಮೋರ್ ಎ ಲೀಡರ್' ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ.

ಬೆಂಗಳೂರು: ಬಿಜೆಪಿಗೆ ಹೋದ ಮೇಲೂ ಶಾಸಕರು ಸಿದ್ದರಾಮಯ್ಯ ಅವರನ್ನೇ ತಮ್ಮ ನಾಯಕರು ಎಂದು ಹೇಳುವುದನ್ನು ಕೇಳಿದರೆ ತಮಗೆ ಬಹಳ ಖುಷಿ ಆಗುತ್ತದೆ. ಬಿಜೆಪಿಯಲ್ಲಿ 'ಯಡಿಯೂರಪ್ಪ ಈಸ್ ನೋ ಮೋರ್ ಎ ಲೀಡರ್' ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಲವು ವರ್ಷಗಳಿಂದ ಕಾಂಗ್ರೆಸ್‌ನ ನಾಯಕರಾಗಿದ್ದಾರೆ. ಅವರು ಅದೃಷ್ಟವಂತರು, ಮುಖ್ಯಮಂತ್ರಿಯಾಗಿದ್ದವರು, ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಮೇಲೂ ಆ ಶಾಸಕರೆಲ್ಲ ಯಡಿಯೂರಪ್ಪ ಬದಲಿಗೆ ಸಿದ್ದರಾಮಯ್ಯ ಅವರನ್ನು ಹೊಗಳುತ್ತಿದ್ದಾರೆನ್ನುವುದೇ ಖುಷಿಯ ವಿಚಾರ ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಸೋತ ಕಾರಣಕ್ಕಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವುದು ಅತ್ಯಂತ ಸಹಜ ಬೆಳವಣಿಗೆಯೇ ಆಗಿದೆ. ಚುನಾವಣಾ ಪ್ರಚಾರದಲ್ಲಿ ತಾವು ಸಹ ಹಲವು ಕ್ಷೇತ್ರಗಳಿಗೆ ಓಡಾಟ ನಡೆಸಿದ್ದು ಹೋದ ಕಡೆಯಲ್ಲೆಲ್ಲ ಜನರು ಸೇರಿದ್ದು ನೋಡಿ ಬಹಳ ಖುಷಿಯಾಗುತ್ತಿತ್ತು. ಆದರೆ ಅವು ಯಾವುವೂ ಮತಗಳಾಗಿ ಪರಿವರ್ತನೆಯಾಗಲಿಲ್ಲ. ಹೀಗಾಗಿ ತಮಗೂ ಈ ಬಗ್ಗೆ ನೋವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


