ರಾಜಕೀಯ

ಬಿಜೆಪಿ ಗೆಲ್ಲೋಕೆ ಕಾಂಗ್ರೆಸ್ಸಿಗರ ದುರಂಹಕಾರವೇ ಕಾರಣ: ಜನಾರ್ಧನ ಪೂಜಾರಿ ವಾಗ್ದಾಳಿ

ಕರ್ನಾಟಕ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರ ದುರಹಂಕಾರವೇ ಕಾರಣವೆಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಜನಾರ್ಧನ ಪೂಜಾರಿ ಹೇಳಿದ್ದಾರೆ.

ಬಿಜೆಪಿ ಗೆಲ್ಲೋಕೆ ಕಾಂಗ್ರೆಸ್ಸಿಗರ ದುರಂಹಕಾರವೇ ಕಾರಣ: ಜನಾರ್ಧನ ಪೂಜಾರಿ ವಾಗ್ದಾಳಿ
ಜನಾರ್ಧನ ಪೂಜಾರಿ
Published On :

ಮಂಗಳೂರು: ಕರ್ನಾಟಕ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರ ದುರಹಂಕಾರವೇ ಕಾರಣವೆಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಜನಾರ್ಧನ ಪೂಜಾರಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ತಾವು ತೋರಿದ್ದ ದುರಹಂಕಾರಕ್ಕೆ ಸರಿಯಾಗಿ ಅನುಭವಿಸಿದ್ದಾರೆ ಎಂದ ಪೂಜಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರತ್ತೆ, ನಾವು ಸಾಯುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

"ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದಾಗ ಕಾಂಗ್ರೆಸ್ ತಾನು ಮಾಡಿದ ತಪ್ಪೇನು ಎಮ್ದು ಅರಿವಾಗುತ್ತದೆ.ಕಾಂಗ್ರೆಸ್ ಮುಖಂಡರ ದುರಹಂಕಾರವೇ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ. ದುರಹಂಕಾರದಿಂದ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ" ಅವರು ಅಭಿಪ್ರಾಯ ಪಟ್ಟಿದ್ದಾರೆ.

"ನಾನು ಪಕ್ಷದ ನಾಯಕರೆದುರು ಕೈಮುಗಿದು ಕಣ್ಣೀರು ಸುರಿಸಿ ಕೇಳಿದರೂ ಅವರು ಅರ್ಥ ಮಾಡಿಕೊಂಡಿಲ್ಲ, ನನ್ನ ಮಾತು ಕೇಳಿಲ್ಲ. ದುರಹಂಕಾರ ಬಿಡಿ ಎಂದರೂ ಯಾರೂ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ, ಈಗ ಅವರು ಅನುಭವಿಸುತ್ತಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುತ್ತೆ, ನಾವು ಸಾಯುತ್ತೇವೆ" ಜನಾರ್ಧನ ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.