ರಾಜಕೀಯ

ಉಪ ಚುನಾವಣೆಯಲ್ಲಿ ಜಯಬೇರಿ: 7 ದೇವಸ್ಥಾನಗಳಿಗೆ ತಲಾ 9 ಕೆಜಿ ಬೆಳ್ಳಿ ಅರ್ಪಿಸಿದ ಆನಂದ್ ಸಿಂಗ್

ಕಳೆದ ಡಿಸೆಂಬರ್ 5ರಂದು ನಡೆದ 15 ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ವಿಜಯನಗರ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ನಗರದ ಕೇರಿಯ ಏಳು ದೇವಸ್ಥಾನಗಳಿಗೆ ತಲಾ 9 ಕೆಜಿ ಬೆಳ್ಳಿ ಅರ್ಪಿಸಿದ್ದಾರೆ.

ಉಪ ಚುನಾವಣೆಯಲ್ಲಿ ಜಯಬೇರಿ: 7 ದೇವಸ್ಥಾನಗಳಿಗೆ ತಲಾ 9 ಕೆಜಿ ಬೆಳ್ಳಿ ಅರ್ಪಿಸಿದ ಆನಂದ್ ಸಿಂಗ್
ಬೆಳ್ಳಿ ಗಟ್ಟಿ ಅರ್ಪಿಸುತ್ತಿರುವ ಆನಂದ್ ಸಿಂಗ್
Published On :

ಹೊಸಪೇಟೆ: ಕಳೆದ ಡಿಸೆಂಬರ್ 5ರಂದು ನಡೆದ 15 ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ವಿಜಯನಗರ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ನಗರದ ಕೇರಿಯ ಏಳು ದೇವಸ್ಥಾನಗಳಿಗೆ ತಲಾ 9 ಕೆಜಿ ಬೆಳ್ಳಿ ಗಟ್ಟಿಗಳನ್ನು ಅರ್ಪಿಸಿದ್ದಾರೆ. 

ಆನಂದ್ ಸಿಂಗ್ ಅವರು, ತಳವಾರ ಕೇರಿಯ ದುರುಗಮ್ಮ ದೇವಿ ದೇವಸ್ಥಾನ,ಬಾಣದಕೇರಿ ನಿಜಲಿಂಗಮ್ಮ ದೇವಿ ದೇವಸ್ಥಾನ, ಚಿತ್ರಕೇರಿಯ ತಾಯಮ್ಮ ದೇವಸ್ಥಾನ, ಉಕ್ಕಡಕೇರಿಯ ಹುಲಿಗೆಮ್ಮ ಹಾಗೂ ಜಲದುರ್ಗಮ್ಮ ದೇವಿಯ ದೇವಸ್ಥಾನ ,ಮ್ಯಾಸಕೇರಿಯ ಹುಲಿಗಮ್ಮ ಕೊಂಗಮ್ಮ ದೇವಸ್ಥಾನ, ಹಾಗೂ ಕಲ್ಲಮ್ಮ ದೇವಿ ದೇವಸ್ಥಾನಕ್ಕೆ ತಲಾ ಒಂಬತ್ತು ಕೆಜಿ ಬೆಳ್ಳಿ ದೇಣಿಗೆ ನೀಡಿ ಹರಕೆ ಸಲ್ಲಿಸಿದ್ದಾರೆ.

ಫಲಿತಾಂಶ ಪ್ರಕಟಗೊಂಡ ನಂತರ ಆನಂದ್ ಸಿಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಪ್ರತಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿ ಬೆಳ್ಳಿ ಅರ್ಪಿಸಿ, ವಿಶೇಷ ಪೂಜೆ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.