ಉಪ ಚುನಾವಣೆ ಸುದ್ದಿ ಸ್ವಾರಸ್ಯ: 106 ವರ್ಷದ ಅಜ್ಜಿಯಿಂದ ಮತದಾನ
ಕಾಂಗ್ರೆಸ್. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಲಿಗೆ ಪ್ರಮುಖವಾಗಿರುವ ಹಾಲಿ ಉಪ ಚುನಾವಣೆ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 106 ವರ್ಷದ ಹಿರಿಯ ಮಹಿಳೆಯೊಬ್ಬರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಮಂಡ್ಯ: ಕಾಂಗ್ರೆಸ್. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಲಿಗೆ ಪ್ರಮುಖವಾಗಿರುವ ಹಾಲಿ ಉಪ ಚುನಾವಣೆ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 106 ವರ್ಷದ ಹಿರಿಯ ಮಹಿಳೆಯೊಬ್ಬರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ 106 ವರ್ಷದ ಮಹಿಳೆ ಸಣ್ಣಮ್ಮ ಎಂಬುವವರು ತಮ್ಮ ಹಕ್ಕು ಚಲಾಯಿಸುವ ಮೂಲಕ ಮತದಾನದ ಪ್ರಾಮುಖ್ಯತೆಯನ್ನು ಸಾರಿದ್ದಾರೆ.
ತಾಲ್ಲೂಕಿನ ಸೊಳ್ಳೇಪುರ ಮತಗಟ್ಟೆಗೆ ತನ್ನ ಮೊಮ್ಮಕ್ಕಳ ಸಹಾಯದೊಂದಿಗೆ ಆಗಮಿಸಿದ ಸಣ್ಣಮ್ಮ, ಚುನಾವಣಾ ಸಿಬ್ಬಂದಿಗಳ ನೆರವು ಪಡೆದ ತಮ್ಮ ಹಕ್ಕು ಚಲಾಯಿಸಿದರು. ಅಲ್ಲದೆ ಮತ ಚಾಲಾವಣೆ ಮಾಡಲು ಬಾರದ ಯುವ ಪೀಳಿಗೆಗೆ ಸಣ್ಣಮ್ಮ ಮಾದರಿಯಾದರು.
ವಾಸ್ತು ಪ್ರಕಾರವೇ ಮತದಾನ ಮಾಡಿದ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜ್
ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜ್ ಮತದಾನವನ್ನು ತಮ್ಮ ಹುಟ್ಟೂರಲ್ಲೇ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ ವಾಸ್ತು ಪ್ರಕಾರ ಮತ ಚಲಾವಣೆ ಮಾಡಿರುವ ಇವರು, ಮತದಾನವ ವೇಳೆ ವಾಸ್ತು ಸರಿ ಇಲ್ಲದಕ್ಕೆ ಸಿಬ್ಬಂದಿ ಕರೆದು ಮತಯಂತ್ರ ತಿರುಗಿಸಿ ಹಕ್ಕು ಚಲಾಯಿಸಿದ ಪ್ರಸಂಗವೂ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


